ಅಂಕೋಲಾ: ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಟ್ಟಣದ ಡಾ.ದಿನಕರ ದೇಸಾಯಿ ಪ್ರಾಥಮಿಕ ಶಾಲೆಯ 6 ಹಾಗೂ 7ನೇ ತರಗತಿಯ ಬಾಲಕ ಹಾಗೂ ಬಾಲಕಿಯರ ಎರಡೂ ತಂಡ ಅಮೋಘ ಸಾಧನೆಯೊಂದಿಗೆ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಬಾಲಕರ ವಿಭಾಗದಲ್ಲಿ ಜುನೈದ್ ಹುಸೇನ್, ಮುಲ್ಲಾ, ಶೇಖರ ರಾಘವೇಂದ್ರ. ಮಹಾಲೆ, ರಜತ ಗಜಾನನ. ನಾಯ್ಕ, ಹೈದರ್ ಖಾನ ಫೈರೋಜ್ ಖಾನ ಹಾಗೂ ಓಂಕಾರ ವಿನಯ ನಾಯ್ಕ, ಬಾಲಕಿಯರ ವಿಭಾಗದಲ್ಲಿ ಕೀರ್ತಿ ಗೋವಿಂದ ನಾಯ್ಕ, ಕೃತಿ ಅಶ್ವಿನ್ ಶೆಟ್ಟಿ, ಪ್ರಾರ್ಥನಾ ಮಧುಕರ ಕೇಣಿ, ಸುಪ್ರಿತಾ ನಾಗರಾಜ ಶೆಟ್ಟಿ ಹಾಗೂ ಪೂರ್ವಿ ಉದಯ ನಾಯ್ಕ ಕ್ರೀಡಾಪಟುಗಳಾಗಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ ಲಕ್ಷ್ಮೇಶ್ವರ ನೀಡಿದ್ದರು.
ಸತತ 8ನೇ ಬಾರಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ವಿಶೇಷ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳ ಸಾಧನೆಗೆ ಕೆನರಾ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ. ಕಾಮತ, ಕಾರ್ಯದರ್ಶಿ ಕೆ.ವಿ. ಶೆಟ್ಟಿ, ಮುಖ್ಯಾಧ್ಯಾಪಕ ಸುಭಾಶ ಕೆ. ನಾಯ್ಕ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.