Slide
Slide
Slide
previous arrow
next arrow

ಉದ್ಯಮಶೀಲತಾ ಜಾಗೃತಿ ಶಿಬಿರ 13ಕ್ಕೆ

300x250 AD

ಕಾರವಾರ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕರ್ನಾಟಕ ಸರ್ಕಾರ ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಾರವಾರ ಸಿಡಾಕ್, ಲೊಯೋಲ ವಿಕಾಸ ಕೇಂದ್ರ, ಹೋಲಿಕಾಸ್ ಸೇವಾ ಸಂಸ್ಥೆ ಮೈನಳ್ಳಿ ಸಂಯುಕ್ತ ಆಶ್ರಯದಲ್ಲಿ ಅ.13ರಂದು ಬೆಳಗ್ಗೆ 11 ಗಂಟೆಗೆ ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರವನ್ನು ಮುಂಡಗೋಡ ತಾಲ್ಲೂಕಿನ ಮೈನಳ್ಳಿ ಹೋಲಿಕ್ರಾಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಉದ್ಯಮಶೀಲತಾ ಸಾಮರ್ಥ್ಯಗಳು, ಉದ್ಯಮ ಸ್ಥಾಪಿಸುವದಕ್ಕೆ ಲಭ್ಯವಿರುವ ಸರ್ಕಾರದ ಯೋಜನೆಗಳು, ಉದ್ಯಮ ಸ್ಥಾಪಿಸಲು ಸಹಾಯ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿರುವ ಸಂಸ್ಥೆಗಳ ಪಾತ್ರ, ಯಶಸ್ವಿ ಉದ್ಯಮಶೀಲರ ಅನುಭವ ಹಂಚಿಕೆ ಮುಂತಾದ ವಿಷಯಗಳನ್ನು ತಿಳಿಸಲಾಗುವುದು. ಆದುದರಿಂದ ಉದ್ಯಮ ಪಾರಂಭಿಸಲು ಉತ್ಸುಕರಾಗಿರುವ ಕುಶಲಕರ್ಮಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

300x250 AD

ಅಭ್ಯರ್ಥಿಗಳು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಕನಿಷ್ಠ್ಠ ಓದುವುದಕ್ಕೆ ಹಾಗೂ ಬರೆಯುವುದಕ್ಕೆ ಬರುವವರು ಆಗಿರಬೇಕು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿಗಾಗಿ ಶಿವಾನಂದ ವೆಂ.ಎಲಿಗಾರ, ಉಪ ನಿದೇರ್ಶಕರು, ಸಿಡಾಕ್, ಕಾರವಾರ, ದೂ.ಸಂಖ್ಯೆ: 94488 12974 ಹಾಗೂ ತರಬೇತುದಾರ ಶಿವರಾಜ ಹೆಳವಿ, ದೂ.ಸಂಖ್ಯೆ: +9187227 08795 ಗೆ ಸಂಪರ್ಕಿಸಬಹುದು ಎಂದು ಸಿಡಾಕ್ ಪ್ರಕಟಣೆ ತಿಳಿಸಿದೆ.

Share This
300x250 AD
300x250 AD
300x250 AD
Back to top