Slide
Slide
Slide
previous arrow
next arrow

ಕೈಗಾ ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿ; ಸುಗಮ ಸಂಚಾರಕ್ಕೆ ಅಡೆತಡೆ

300x250 AD

ಕಾರವಾರ: ತಾಲೂಕಿನ ಮಲ್ಲಾಪುರ, ಕದ್ರಾ, ಗೋಟೆಗಾಳಿ, ಹಳಗಾ, ಘಾಡಸಾಯಿ, ಹಣಕೋಣ, ಅಸ್ನೋಟಿ, ಚಿತ್ತಾಕುಲ, ದೇವಳಮಕ್ಕಿ, ಕೆರವಡಿ, ವೈಲವಾಡಾ ಮತ್ತು ಕಿನ್ನರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಈ ಭಾಗದ ಸಾರ್ವಜನಿಕ ರಸ್ತೆಗಳು ಸುಗಮ ಸಂಚಾರಕ್ಕೆ ಅಡೆತಡೆಯಾಗಿದೆ. ಬಿಡಾಡಿದನಗಳ ಹಾವಳಿಯಿಂದಾಗಿ ವಾಹನಗಳು ಅಪಘಾತಕ್ಕೊಳಗಾಗಿ ಸಾವು- ನೋವುಂಟಾಗುವಂತಾಗಿದೆ.

ಬಿಡಾಡಿ ದನಗಳು ಹೆದ್ದಾರಿಯ ಮಧ್ಯದಲ್ಲಿ ಗುಂಪುಗುಂಪಾಗಿ ನಿಲ್ಲುವುದು, ಮಲಗಿಕೊಳ್ಳುವುದು ಮಾಡುತ್ತಿದೆ. ಸಾರ್ವಜನಿಕ ರಸ್ತೆಗಳಲ್ಲೇ ಬೀಡುಬಿಟ್ಟಿರುವ ದನಗಳಿಂದ ತಪ್ಪಿಸಿಕೊಂಡು ಪ್ರಯಾಣಿಸಲು ತಡಕಾಡಿ ಅಪಘಾತಕ್ಕೊಳಗಾಗಿ ಗೋಳಾಡುವ ವಾಹನಸವಾರರ ಮತ್ತು ಪ್ರಯಾಣಿಕರ ಅಳಲು ಅರಣ್ಯರೋದನವಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ ಬಿಡಾಡಿದನಗಳ ಹಾವಳಿಯಿಂದಾಗಿ ಪ್ರಯಾಣಿಕರ ಮತ್ತು ವಾಹನಸವಾರರ ಜೀವಕ್ಕೆ ಕುತ್ತುತರುವಂತಾಗಿದೆ.

ಜಿಲ್ಲೆಯ ಸಾರ್ವಜನಿಕ ರಸ್ತೆಗಳಲ್ಲಿ ಪ್ರಯಾಣಿಕರು ಸುಗಮ ಹಾಗೂ ಸುರಕ್ಷಿತವಾಗಿ ಸಂಚರಿಸಲು ಮುಕ್ತವಾದ ರಸ್ತೆಗಳನ್ನು ಒದಗಿಸುವ ಜವಾಬ್ದಾರಿ ಹಾಗೂ ಹೊಣೆಹೊತ್ತ ಉತ್ತರಕನ್ನಡ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತಿ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಜಿಲ್ಲೆಯ ಸಾರ್ವಜನಿಕ ರಸ್ತೆಗಳಲ್ಲಿ ಬಿಡಾಡಿದನಗಳ ಹಾವಳಿಯನ್ನು ತಪ್ಪಿಸಿ ಪ್ರಯಾಣಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ಸೂಕ್ತಕ್ರಮ ಕೈಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಕೆಜಿಎಸ್ ಎಸ್‌ಸಿ ಮತ್ತು ಎಸ್‌ಟಿ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಶನ್ ಶಾಸಕ ಸತೀಶ್ ಸೈಲ್‌ಗೆ ಪತ್ರ ಬರೆದಿದೆ.

300x250 AD

Share This
300x250 AD
300x250 AD
300x250 AD
Back to top