Slide
Slide
Slide
previous arrow
next arrow

ಹುಟ್ಟೂರಿನಲ್ಲಿ ಡಾ.ಅವಧಾನಿ ಅಂತ್ಯಕ್ರಿಯೆ

300x250 AD

ಹೊನ್ನಾವರ: ತಾಲೂಕಿನ ನೇತ್ರತತ್ಞ ಡಾ.ಉಮೇಶ ಅವಧಾನಿ (68) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದು, ಶುಕ್ರವಾರ ಹೂಟ್ಟೂರಾದ ಕರ್ಕಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ಕರ್ಕಿಯ ಶ್ರೀ ಚೆನ್ನಕೇಶವ ಫ್ರೌಢಶಾಲಾ ಆವಾರದಲ್ಲಿ ಅವಧಾನಿಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಈ ವೇಳೆ ಜನಸಾಗರವೇ ಹರಿದು ಬಂದಿತ್ತು. ಕರ್ಕಿ ಗ್ರಾಮ ಅಕ್ಷರಶಃ ಮೌನಕ್ಕೆ ಶರಣಾಗಿದೆ. ಜನಸಾಮಾನ್ಯರ ವೈದ್ಯರೆಂದೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಅವಧಾನಿ ಸೇವೆ ಇನ್ನು ನೆನಪು ಮಾತ್ರ. ಅವಧಾನಿಯವರ ಇಬ್ಬರು ಪುತ್ರಿಯರು, ಪತ್ನಿ ಮತ್ತು ಕುಟುಂಬದವರು ದುಃಖಿತರಾಗಿ ಮೌನಕ್ಕೆ ಶರಣಾಗಿದ್ದರು.

300x250 AD

ಶಾಸಕ ದಿನಕರ ಶೆಟ್ಟಿ, ಮಾಜಿ ಸಚಿವ ಆರ್.ಎನ್.ನಾಯ್ಕ, ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಸೇರಿದಂತೆ ಗಣ್ಯರು, ಕರ್ಕಿ ಗ್ರಾ.ಪಂ ಜನಪ್ರತಿನಿಧಿಗಳು ಅವಧಾನಿಯವರ ಅಂತಿಮ ದರ್ಶನ ಪಡೆದರು.

Share This
300x250 AD
300x250 AD
300x250 AD
Back to top