Slide
Slide
Slide
previous arrow
next arrow

ಅ.7ಕ್ಕೆ ಕಾವ್ಯಾವಲೋಕನ, ಕವಿಗೋಷ್ಠಿ ಕಾರ್ಯಕ್ರಮ

300x250 AD

ಯಲ್ಲಾಪುರ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಪಟ್ಟಣದ ಶಿವಶಂಕರ ನಿಲಯದಲ್ಲಿ ಅ.7ರಂದು ಮಧ್ಯಾಹ್ನ 2.30ಕ್ಕೆ ‘ಕಾವ್ಯಾವಲೋಕನ ಹಾಗೂ ಕವಿಗೋಷ್ಠಿ’ ಕಾರ್ಯಕ್ರಮ ನಡೆಯಲಿದೆ.

ಸಾಹಿತಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉತ್ತರಕನ್ನಡ ಜಿಲ್ಲಾಧ್ಯಕ್ಷರಾದ ಶಿವಲೀಲಾ ಹುಣಸಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಡಗೋಡದ ಸಾಹಿತಿ ಜ್ಯೋತಿ ಎಸ್ ಅಚಾರಿ ಕಾವ್ಯಾವಲೋಕನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಜಗದೀಶ ನಾಯಕ ಆಗಮಿಸಲಿದ್ದಾರೆ.

300x250 AD

ನಂತರ ನಡೆಯುವ ಕವಿಗೋಷ್ಠಿಯ ವಿಷಯ ‘ಭಾರತದ ಭಾವೈಕ್ಯತೆ’ಯಾಗಿದ್ದು, ಯಮುನಾ ನಾಯ್ಕ, ಡಾ.ನವೀನಕುಮಾರ ಎ.ಜೆ., ರೇಖಾ ಭಟ್ಟ, ಗಂಗಾಧರ ಎಸ್.ಎಲ್., ರಾಘವೇಂದ್ರ ಹೊನ್ನಾವರ, ಪುಷ್ಪಾ ಮಾಳಕೊಪ್ಪ, ಡಾ.ಸುಚೇತಾ ಮದ್ಗುಣಿ, ವಿನೋದ ಐಗಳ, ಕೇಬಲ್ ನಾಗೇಶ, ಸತೀಶ ಶೆಟ್ಟಿ, ಎಲ್.ರವಿಕುಮಾರ, ನಾಗೇಶ ನಾಯ್ಕ, ಪುಷ್ಪಲತಾ ಎಸ್ ನಾಯಕ, ಗೀತಾ ನಾಯಕ, ನಯನಾ ಬಾಂದೇಕರ,  ಕಲ್ಪನಾ ಅಚಾರಿ, ಕುಮಾರಿ ನಯನಾ ಪಟಗಾರ, ಕುಮಾರಿ ಶ್ರೀರಕ್ಷಾ ವೇರ್ಣೇಕರ ಭಾಗವಹಿಸುವ ಕವಿಗಳಾಗಿದ್ದಾರೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ರಾಘವೇಂದ್ರ ಪಟಗಾರ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top