Slide
Slide
Slide
previous arrow
next arrow

ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ದಿನಕರ ಶೆಟ್ಟಿ

300x250 AD

ಹೊನ್ನಾವರ: ಪಟ್ಟಣದ ಬಸ್ ನಿಲ್ದಾಣ ಮುಂಭಾಗ ಹದಗೆಟ್ಟ ರಸ್ತೆ ಮರುಡಾಂಬರಿಕರಣ ನಡೆಯುತ್ತಿದ್ದು, ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ವರ್ಷ ನೂತನವಾಗಿ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದರು, ಮುಂಭಾಗದ ರಸ್ತೆಯು ಹದಗೆಟ್ಟಿರುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಹಲವು ಬಾರಿ ಗ್ರಾಮಸ್ಥರು ಪಟ್ಟಣ ಪಂಚಾಯತಿಗೆ ಮನವಿ ಮಾಡಿದ್ದರು. ಇದೀಗ ಶಾಸಕರು ವಿಶೇಷ ಮುತುವರ್ಜಿ ವಹಿಸಿ ರಸ್ತೆ ಮರುಡಾಂಬರಿಕರಣದ ಕಾಮಗಾರಿ ನಡೆಸಲು ಸೂಚಿಸಿದ್ದರು. ಶುಕ್ರವಾರ ಕಾಮಗಾರಿ ನಡೆಯುತ್ತಿದ್ದಾಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸ್ ನಿಲ್ದಾಣದ ಮುಂಭಾಗದ ರಸ್ತೆ ಡಾಂಬರಿಕರಣ ಕಾರ್ಯ ನಡೆಯುತ್ತಿದೆ. ಇಲ್ಲಿ ಗಟಾರ ಸಮಸ್ಯೆಯಿಂದ ನೀರು ನಿಲ್ಲುತ್ತಿತ್ತು. 5 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಲಿದ್ದು, ಆ ನಂತರ ಸಮಸ್ಯೆ ಬಗೆಹರಿಯಲಿದೆ. ಮುಂದಿನ ದಿನದಲ್ಲಿ ತಾಲೂಕಿನ ಎಲ್ಲಾ ರಸ್ತೆ ಸರಿಪಡಿಸುದಾಗಿ ಇದೇ ವೇಳೆ ಭರವಸೆ ನೀಡಿದರು.

300x250 AD

ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ಸುಭಾಸ ಹರಿಜನ, ಮಹೇಶ ಮೇಸ್ತ, ಉಲ್ಲಾಸ ನಾಯ್ಕ, ಶ್ರೀಪಾದ ನಾಯ್ಕ, ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು, ರಿಕ್ಷಾ ಚಾಲಕರು ಹಾಜರಿದ್ದರು.

Share This
300x250 AD
300x250 AD
300x250 AD
Back to top