Slide
Slide
Slide
previous arrow
next arrow

ಸಂಜೀವಿನಿ ಒಕ್ಕೂಟದ ಮೂಲಕ ಮಹಿಳೆಯರ ಸ್ವಾವಲಂಬನೆಗೆ ವಿಶೇಷ ಒತ್ತು: ಶಾಸಕ ದಿನಕರ ಶೆಟ್ಟಿ

300x250 AD

ಹೊನ್ನಾವರ: ಸಂಜೀವಿನಿ ಒಕ್ಕೂಟದ ಮೂಲಕ ಮಹಿಳೆಯರ ಸ್ವಾವಲಂಬನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ತಾಲೂಕಿನ ಚಂದಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ, ಮತ್ತು ಜಿ.ಪಂ.ಹಾಗೂ ತಾ.ಪಂ. ಚಂದಾವರ ಗ್ರಾ.ಪಂ. ಸಂಜೀವಿನಿ ಒಕ್ಕೂಟಗಳ ಆಶ್ರಯದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರಿಂದ ಉತ್ಪಾದಿಸಲ್ಪಟ್ಟ ಉತ್ಪನ್ನಗಳ ಸಂಜೀವಿನಿ ಮಾರ್ಟ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ತಯಾರಿಸಿದ ವಿವಿಧ ವಸ್ತುಗಳನ್ನು ಒಂದಡೆ ಮಾರಾಟ ಮಾಡುವ ಉದ್ದೇಶದಿಂದ ಈ ಮಳಿಗೆ ಆರಂಭಿಸುತ್ತಿದ್ದು, ಮಹಿಳೆಯರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮದ ಅಭಿವೃದ್ದಿಗೆ ಗ್ರಾ.ಪಂ. ಪ್ರತಿನಿಧಿಗಳು ಒಂದಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಗ್ರಾಮದ ಅಭಿವೃದ್ದಿ ಆಗಲಿದೆ ಎಂದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಎನ್‌ಆರ್‌ಎಂಎಲ್ ಯೋಜನೆಯ ಮೂಲಕ ಈ ಮಳಿಗೆ ಆರಂಭಿಸಿದ್ದು, ನರೇಗಾ ಯೋಜನೆಯ ಮೂಲಕ ಮುಂದಿನ ದಿನದಲ್ಲಿ ನಾಲ್ಕು ಮಳಿಗೆ ಪ್ರಾರಂಭಿಸಲಾಗುವುದು ಎಂದರು‌.

300x250 AD

ಸಂಜೀವಿನಿ ಒಕ್ಕೂಟದ ತಾಲೂಕ ಅಧ್ಯಕ್ಷ ಸರೋಜಾ ಶೆಟ್ಟಿ ಮಾತನಾಡಿ, ಈ ಹಿಂದೆ ಸಂತೆ ಮಾಡಿದಾಗ ಒಂದು ದಿನ ಮಾತ್ರ ವ್ಯಾಪಾರ ನಡೆಯುತ್ತಿತ್ತು. ಆದರೆ ಇದೀಗ ಖಾಯಂ ಮಳಿಗೆಯಿಂದ ಪ್ರತಿನಿತ್ಯ ಉತ್ಪನ್ನಗಳು ದೊರಯಲಿದೆ. ಮಹಿಳೆಯರು ಕೂಡಾ ತಾವು ಉತ್ಪಾದಿಸಿದ ವಸ್ತುಗಳನ್ನು ಇಲ್ಲಿ ತಂದು ಮಾರಾಟ ಮಾಡಬಹದು. ಇದರಿಂದ ಎಲ್ಲರಿಗೂ ಅನೂಕೂಲವಾಗಲಿದೆ. ಮುಂದಿನ ದಿನದಲ್ಲಿ ತಾಲೂಕು ಕೇಂದ್ರದಲ್ಲಿಯೂ ಈ ಮಳಿಗೆ ಕಾರ್ಯರಂಭವಾಗಲಿದೆ ಎಂದರು. ವಿವಿಧ ಬಗೆಯ ತಿಂಡಿತಿನಿಸುಗಳು, ಗೃಹಬಳಕೆಯ ವಸ್ತುಗಳು, ಬಟ್ಟೆಗಳು, ಕರಕುಶಲ ವಸ್ತುಗಳು ಮಳಿಗೆಯಲ್ಲಿ ಮಾರಾಟಕ್ಕೆ ಇಡಲಾಗಿದ್ದು, ಶಾಸಕರು ವಿವಿಧ ವಸ್ತುಗಳನ್ನು ಇದೇ ವೇಳೆ ಖರೀದಿಸಿದರು.

ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ನಾಯ್ಕ, ಉಪಾಧ್ಯಕ್ಷೆ ನಿರ್ಮಲಾ ಡಯಾಸ್, ಗ್ರಾಮೀಣಾಭಿವೃದ್ಧಿ ಸಹಾಯಕ ನಿರ್ದೇಶಕ ಕೃಷ್ಣಾನಂದ, ಎನ್‌ಆರ್‌ಎಂಎಲ್ ಮೇಲ್ವಿಚಾರಕರಾದ ಬಾಲಚಂದ್ರ ನಾಯ್ಕ, ವಿಶಾಲ ನಾಯ್ಕ, ಗ್ರಾ.ಪಂ.ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top