ಕಾರವಾರ: 2022-2023ನೇ ಸಾಲಿನಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ಹಿಂದು ಭಂಡಾರಿ ಸಮಾಜದ ವಿದ್ಯಾರ್ಥಿಗಳಿಂದ ತಾಲೂಕಾ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2022-2023ನೇ ಸಾಲಿನಲ್ಲಿ 1ರಿಂದ 10ನೇ ತರಗತಿಯಲ್ಲಿ ಶೇಕಡಾ 90 ಹಾಗೂ ಅಂತಿಮ ಪಿಯುಸಿ ವಿಭಾಗದ ಕಲೆ, ವಾಣಿಜ್ಯ ಮತ್ತು ವಿಜ್ಞಾನದಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು ಅ.21ರ ಒಳಗೆ ಅಂಕಪಟ್ಟಿಯ ನಕಲುಪ್ರತಿ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಅಂಕಪಟ್ಟಿಯ ಹಿಂದುಗಡೆ ಸ್ವ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿ ಅಂಚೆಯ ಮೂಲಕ ಅಥವಾ ಖುದ್ದಾಗಿ ನೀಡಲು ಈ ಕೆಳ ಕಾಣಸಿರುವ ವಿಳಾಸಕ್ಕೆ ಕಳುಹಿಸಲು ತಾಲೂಕಾ ಭಂಡಾರಿ ಸಮಾಜೋನ್ನತಿ ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೋಹನ ಎಸ್.ಕಿಂದರ (9916843556), ಪ್ರವೀಣ ಎಸ್. ಮಾಂಟೇಕರ (6360225527), ಸಂಜಯ ಕಾಂಬ್ಳೆ (7760740600) ಅವರನ್ನು ಸಂಪರ್ಕಿಸಬಹುದಾಗಿದೆ. 1ನೇ ತರಗತಿಯಿಂದ 9ನೇ ತರಗತಿಯಲ್ಲಿ ಉತ್ತೀರ್ಣರಾದ ಅಂಕಗಳು ಗ್ರೇಡ್ ನೀಡಿದಲ್ಲಿ ಅವುಗಳನ್ನು ಅಂಕಗಳ ರೂಪದಲ್ಲಿ ಪರಿವರ್ತಿಸಿ ಅರ್ಜಿ ಸಲ್ಲಿಸುವುದು. ಗ್ರೇಡ್‌ನಲ್ಲಿ ಸಲ್ಲಿಸಿದ ಅಂಕಪಟ್ಟಿ ಪರಿಗಣಿಸಲಾಗುವುದಿಲ್ಲ. ಅಂಕಪಟ್ಟಿಗಳು ಅ.21ರ ಒಳಗೆ ತಲುಪಬೇಕು. ತಡವಾಗಿ ಬಂದ ಅರ್ಜಿಗಳನ್ನ ತಿರಸ್ಕರಿಸಲಾಗುತ್ತದೆ.