Slide
Slide
Slide
previous arrow
next arrow

ರಾ.ಹೆ.66ರ ಕಾಮಗಾರಿ ಶೀಘ್ರ ಮುಗಿಸಲು ಗಣಪತಿ ಉಳ್ವೇಕರ ಆಗ್ರಹ

300x250 AD

ಕಾರವಾರ: ಕಾರವಾರದಿಂದ ಭಟ್ಕಳದವರೆಗೆ ಐಆರ್‌ಬಿ ಸಂಸ್ಥೆಯು ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಗಲೀಕರಣವನ್ನು ನಡೆಸುತ್ತಿದ್ದು, ಜಿಲ್ಲೆಯ ಹಲವು ಭಾಗದಲ್ಲಿ ರಸ್ತೆ ಕಾಮಗಾರಿ ಮುಗಿಸದೇ ನೆನೆಗುದಿಗೆ ಬಿದ್ದಿದೆ. ಜಿಲ್ಲೆಯ ಕರಾವಳಿಯ ಜೀವನಾಳದಂತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಕಡೆ ಕಾಮಗಾರಿಗಳು ಪೂರ್ತಿಯಾಗದ ಕಾರಣ ನಿರಂತರ ಅಪಘಾತಗಳು ನಡೆಯುತ್ತಲೇ ಇವೆ. ಹೀಗಾಗಿ ಈ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಶೀಘ್ರವಾಗಿ ಮುಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಆಗ್ರಹಿಸಿದ್ದಾರೆ.

ಈಗಾಗಲೇ ಜಿಲ್ಲೆಯ ಎರಡು ಕಡೆ ಹಾಗೂ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊ0ಡ0ತೆ ಇನ್ನೊಂದು ಕಡೆ ಐಆರ್‌ಬಿ ಟೋಲ್ ಗೇಟ್‌ಗಳನ್ನು ಅಳವಡಿಸಿದು ವಾಹನಗಳ ಮಾಲಿಕರಿಂದ ಟೋಲ್ ಹಣವನ್ನು ಸಹ ವಸೂಲಿ ಮಾಡುತ್ತಿದ್ದಾರೆ, ಟೋಲ್ ಹಣವನ್ನು ವಸೂಲಿ ಮಾಡಲು ಆರಂಭಿಸುವ ಪೂರ್ವದಲ್ಲಿಯೇ ಈ ಕಾಮಗಾರಿಯನ್ನು ಮುಗಿಸಬೇಕಾಗಿದ್ದರೂ ಐಆರ್‌ಬಿಯ ನಿರ್ಲಕ್ಷತೆ ಹಾಗೂ ಕೆಲ ತಾಂತ್ರಿಕ ಮತ್ತು ರಾಜಕೀಯ ಕಾರಣಗಳಿಂದ ಕಾಮಗಾರಿ ಮುಗಿಯದೇ ಹಾಗೆಯೇ ಉಳಿದುಕೊಂಡಿದೆ. ಆ ಕಾರಣ ಈ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಐಆರ್‌ಬಿ ಮುಗಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಐಆರ್‌ಬಿಗೆ ನಿಗದಿತ ಗಡುವನ್ನು ನೀಡುವ ಮೂಲಕ ಈ ಸಂಸ್ಥೆ ಆ ಗಡುವಿನ ಅವಧಿಯಲ್ಲಿಯೇ ಕಾಮಗಾರಿಯನ್ನು ಮುಗಿಸಬೇಕು ಎಂದು ನಾನು ಆಗ್ರಹಿಸುತ್ತಿದ್ದೇನೆ ಎಂದು ಉಳ್ವೇಕರ ತಿಳಿಸಿದ್ದಾರೆ.

300x250 AD

ಈ ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ಕಾಮಗಾರಿಯ ಹಿನ್ನೆಲೆಯಲ್ಲಿ ಹಲವು ಅಪಘಾತಗಳಾಗಿ ಕೆಲವರು ಜೀವ ಕಳೆದುಕೊಂಡಿದ್ದರೆ, ಇನ್ನು ಕೆಲವರು ಅಪಘಾತದಲ್ಲಿ ಅಂಗಾಗಗಳಿಗೆ ಹಾನಿಯಾಗಿ ಜೀವಚ್ಛವಾದಂತಾಗಿದ್ದಾರೆ. ಈ ವ್ಯಕ್ತಿಗಳ ಮೇಲೆ ಅವಲಂಬಿತ ಅವರ ಕುಟುಂಬಗಳು ಬೀದಿಗೆ ಬಿದ್ದಿವೆ. ಐಆರ್‌ಬಿ ಕಾಮಗಾರಿಯಿಂದಾಗಿ ಯಾರಿಗೆಲ್ಲ ಅಪಘಾತವಾಗಿದೆಯೋ ಅಂಥವರನ್ನು ಜಿಲ್ಲಾಡಳಿತ ಗುರುತಿಸಿ ಅವರ ಪಟ್ಟಿಯನ್ನು ಐಆರ್‌ಬಿಗೆ ನೀಡಬೇಕು ಐಆರ್‌ಬಿಯ ಮೂಲಕವೇ ಈ ಕುಟುಂಬಗಳಿಗೆ ಪರಿಹಾರವನ್ನು ಕೊಡುವ ವ್ಯವಸ್ಥೆಯಾಗಬೇಕು ಎಂದು ಉಳ್ವೇಕರ್ ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top