Slide
Slide
Slide
previous arrow
next arrow

ಹಳೆದಾಂಡೇಲಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

300x250 AD

ದಾಂಡೇಲಿ: ಹಳಿಯಾಳದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ನಗರದ ಹಳೆದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಟಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಸ್ಮೃತಿ ನಾಯ್ಕ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಪೂರ್ವ ಕಾಳೆ ಹಾಗೂ ಡಿಸ್ಕಸ್ ಥ್ರೋ ನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಆಫ್ರೀನ್ ಉಗ್ರಾಣಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

300x250 AD

ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯೆ ನಾಗರೇಖಾ ಗಾಂವ್ಕರ್, ಕಾಲೇಜಿನ ಕ್ರೀಡಾ ಸಂಚಾಲಕ ಅನಿಲ ರೇಗೋ, ಬೋಧಕ ಸಿಬ್ಬಂದಿಗಳಾದ ಸುಮಂಗಲಾ ನಾಯ್ಕ, ಪ್ರಶಾಂತ ಜಾಧವ, ಪ್ರವೀಣಕುಮಾರ ಸುಲಾಖೆ, ಶಶಿಕಲಾ ಬನ್ನಿಗೋಳ, ಪೂರ್ಣಿಮಾ ಬೆಳವಡಿ, ಉಷಾ ಸಲಗಾವಂಕರ, ಸುಜಾತಾ ನಾಯ್ಕ, ಗೌರಿ ಚಲುವಾದಿ, ರಾಧಿಕಾ ಚೊಪಡೆ, ಸ್ಯಾಂಡಿ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top