Slide
Slide
Slide
previous arrow
next arrow

ಹಲ್ಲೆಗೊಳಗಾದ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ನಿವೇದಿತ್ ಆಳ್ವಾ ಭೇಟಿ

300x250 AD

ಕುಮಟಾ: ಇತ್ತೀಚೆಗೆ ಹಲ್ಲೆಗೊಳಗಾದ ಕಾಂಗ್ರೆಸ್ ಕಾರ್ಯಕರ್ತ ಶಂಕರ ಸೋಡನ್ಕರ್ ಅವರ ಮನೆಗೆ ಭೇಟಿ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ತಪ್ಪಿತಸ್ಥರನ್ನು ಶೀಘ್ರ ಬಂಧಿಸುವ0ತೆ ಐಜಿಪಿ ಅವರನ್ನು ಆಗ್ರಹಿಸುವುದಾಗಿ ತಿಳಿಸಿದ್ದಾರೆ.

ತಾಲೂಕಿನ ಅಳ್ವೆದಂಡೆಯ ನಿವಾಸಿ ಶಂಕರ ಕೃಷ್ಣ ಸೋಡನ್ಕರ್ ಅವರು ಅಳ್ವೆದಂಡೆಯ ಸಮುದ್ರ ತೀರದಲ್ಲಿ ಆಗಸ್ಟ್ 28ರಂದು ಮಧ್ಯಾಹ್ನ 4.30 ಸುಮಾರಿಗೆ ಮೀನುಗಾರಿಕೆ ಸಂಬ0ಧ ನಿಂತಿರುವಾಗ ಆರೋಪಿತರಾದ ದರ್ಶನ ಸುಧಾಕರ ತಾರಿ ಹಾಗೂ ಸುಧಾಕರ ರಾಮಚಂದ್ರ ತಾರಿ ಎನ್ನುವವರು ಶಂಕರ ಅವರ ಮೇಲೆ ಹಲ್ಲೆ ನಡೆಸಿ, ಆತನ ಕಾಲು ಮರಿಯಲಾಗಿದೆ ಎಂದು ಪೊಲೀಸ್ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಇವತ್ತಿಗೆ ಒಂದು ತಿಂಗಳು ಗತಿಸಿದರೂ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ನೊಂದ ಸಂತ್ರಸ್ತ ಶಂಕರ ಸೋಡನ್ಕರ್ ಅವರು ಆರೋಪಿಸಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ಪಕ್ಷದ ಕಾರ್ಯಕರ್ತ ಶಂಕರ ಅವರ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಹಲ್ಲೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಆಳ್ವಾರು ಆರೋಪಿತರನ್ನು ತಕ್ಷಣ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಐಜಿಪಿ ಅವರನ್ನು ಒತ್ತಾಯಿಸುತ್ತೇನೆ. ಅಲ್ಲದೇ ಗೃಹ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಅವರನ್ನು ಕೂಡ ಸಂಪರ್ಕಿಸಿ, ಈ ಪ್ರಕರಣ ಸಮಗ್ರ ಮಾಹಿತಿ ನೀಡುವ ಜೊತೆಗೆ ತಪ್ಪಿದಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸುವ ಜೊತೆಗೆ ಈ ಪ್ರಕರಣದಲ್ಲಿ ತನಿಖಾಧಿಕಾರಿಗಳ ನಿರ್ಲಕ್ಷ ಧೋರಣೆಯ ಬಗ್ಗೆಯೂ ಐಜಿಪಿ ಮತ್ತು ಎಸ್ಪಿ ಅವರಿಗೆ ದೂರು ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.

300x250 AD

ಈ ಪ್ರಕರಣದಲ್ಲಿ ನೊಂದ ಕಾರ್ಯಕರ್ತನಿಗೆ ನ್ಯಾಯಕೊಡಿಸುವಲ್ಲಿ ಮುತುವರ್ಜಿ ವಹಿಸುವುದಾಗಿಯೂ ಆಳ್ವಾ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಕಾಂಗ್ರೆಸ್ ಮುಖಂಡರು ಇದ್ದರು.

Share This
300x250 AD
300x250 AD
300x250 AD
Back to top