Slide
Slide
Slide
previous arrow
next arrow

ಅ.7 ಕ್ಕೆ ನಿಸ್ವಾರ್ಥ ಹವ್ಯಾಸಿ ಕಲಾವಿದರಿಗೆ ಗೌರವ ಸಮರ್ಪಣೆ

300x250 AD

ಯಲ್ಲಾಪುರ: ಯಕ್ಷಗಾನ, ತಾಳಮದ್ದಲೆಗಳಲ್ಲಿ ಮನ್ನಣೆ, ಜನಪ್ರಿಯತೆ ಗಳಿಸಿ, ಇದರಲ್ಲೇ ಬದುಕು ಕಟ್ಟಿಕೂಂಡ ಕಲಾವಿದರು ಅನೇಕರು. ಆದರೆ, ಪ್ರಸಿದ್ಧಿ, ಪ್ರಚಾರ, ಪ್ರಶಸ್ತಿ, ಪ್ರಶಂಸೆಗಳ ಹಂಗಿಲ್ಲದೇ, ಹವ್ಯಾಸಿಯಾಗಿದ್ದುಕೊಂಡೇ ಕಲೆಯ ಸೇವೆಯನ್ನು ದಶಕಗಳ ಕಾಲ ಮಾಡಿದ ಅಸಂಖ್ಯ ಕಲಾ ಸೇವಕರಿದ್ದಾರೆ. ಅಂತಹ ನಿಸ್ವಾರ್ಥ ಕಲಾ ಸೇವಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಅಣಲಗಾರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಅ.7ರಂದು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ತೆಲಂಗಾರದ ಕರ್ನಾಟಕ ಕಲಾ ಸನ್ನಿಧಿ ಅಧ್ಯಕ್ಷ ಶ್ರೀಧರ ಭಟ್ ಅಣಲಗಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಸೌಲಭ್ಯಗಳಿಲ್ಲದ ಕಾಲದಲ್ಲೂ ಪ್ರತಿಫಲಾಪೇಕ್ಷೆ ಇಲ್ಲದೇ ಕಲಾ ಸೇವೆಯನ್ನು ದಶಕಗಳ ಕಾಲಮಾಡಿದ ತೆರೆಮರೆಯ ಕಲಾ ಸಾಧಕರನ್ನು ಗುರುತಿಸಿ, ಅವರನ್ನು ಸಂದರ್ಶಿಸಿ, ಅವರ ಕಲಾಸೇವೆಯನ್ನು ದಾಖಲಿಸಿ, ಸಮಾಜದ ಎದುರು ತೆರೆದಿಡುರುವ ಪ್ರಯತ್ನವನ್ನು ನಮ್ಮ ಬಳಗ ಕಳೆದ ಕಳೆದ ಮೂರು ವರ್ಷದಿಂದ ಮಾಡುತ್ತ ಬಂದಿದೆ. ಈವರೆಗೂ ಅಂತಹ 50ಕ್ಕೂ ಹೆಚ್ಚು ಕಲಾವಿದರನ್ನು ಸಂದರ್ಶನ ಮಾಡಿ, ಅವರ ಕುರಿತಾದ ಲೇಖನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಯಲ್ಲಾಪುರ, ಶಿರಸಿ, ಅಂಕೋಲಾ, ಕುಮಟಾ, ಜೋಯಿಡಾ, ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ನಿಟ್ಟೂರು ಭಾಗದ ಕಲಾವಿದರ ಕಲಾ ಸೇವೆಯ ದಾಖಲೀಕರಣ ಮಾಡಲಾಗಿದೆ. ನಮ್ಮ ಈ ಕಾರ್ಯವನ್ನು ಇನ್ನೂ ಮುಂದೆ ಕರ್ನಾಟಕ ಕಲಾ ಸನ್ನಿಧಿ ಎಂಬ ಸಂಸ್ಥೆಯ ಮೂಲಕ ಮುಂದುವರೆಸುವ ಆಶಯ ಹೊಂದಿದ್ದೇವೆ. ಕೇವಲ ಯಕ್ಷಗಾನ ತಾಳಮದ್ದಲೆಗೆ ಸೀಮಿತವಾಗದೆ ಇತರ ಕಲಾ ಪ್ರಕಾರಗಳನ್ನು ಈ ರೀತಿ ಸೇವೆಗೆದ ಕಲಾವಿದರನ್ನು ಗುರುತಿಸಿ ದಾಖಲೀಕರಣ ಮಾಡುವ ಉದ್ದೇಶ ನಮ್ಮದಾಗಿದೆ ಎಂದು ತಿಳಿಸಿದರು.

ಅ.7ರ ಕಾರ್ಯಕ್ರಮವನ್ನು ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ಉದ್ಘಾಟಿಸಲಿದ್ದಾರೆ. ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ತೆಲಂಗಾರ ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ್, ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಎನ್.ಆರ್.ಭಟ್ಟ ಬಿದ್ರೆಪಾಲ ಹಾಗೂ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಭಟ್ ಆನಗೋಡ ಮುಖ್ಯ ಅತಿಥಿಗಳಾಗಿದ್ದಾರೆ. ದಿ.ರಾಮ ಭಟ್ಟ ಬಾಳೇಕುಂಕಿ ದಿ.ಮುರಳಿಧರ ಯಲ್ಲಾಪುರ (ನಾಯ್ಕ), ದಿ.ನಾರಾಯಣ ಹೆಗಡೆ ಕಡೇಮನೆ, ದಿ.ಸುಬ್ರಾಯ ಭಟ್ಟ ಅಟ್ಟದಬೈಲ್, ದಿ. ರಾಮಣ್ಣ ತಾರಿಕುಂಟೆ, ದಿ.ನಾರಾಯಣ ಹೆಗಡೆ ಜೋಗದಮನೆ, ದಿ.ಶಿವರಾಮ ಭಟ್ಟ ದುಂಡಿಗದ್ದೆ ಮತ್ತು ದಿ.ರಾಮಕೃಷ್ಣ ಗಾಂವ್ಕರ ಕಂಚಿಪಾಲ ಇವರನ್ನು ಮರಣೋತ್ತರ ಗೌರವ ಸಮರ್ಪಣೆ ಹಾಗೂ 42ಕ್ಕೂ ಹೆಚ್ಚು ನಿಸ್ವಾರ್ಥ ಕಲಾ ಸೇವಕರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ನಂತರ ಸನ್ಮಾನಿತ ಕಲಾವಿದರಿಂದ ಸಾಂಪ್ರದಾಯಿಕ ಶೈಲಿಯ ಯಕ್ಷಗಾನ ಪದ್ಯಗಳ ಗಾನ ಸಂಜೆ ನಡೆಯಲಿದೆ ಎಂದರು.

300x250 AD

ಈ ಸಂದರ್ಭದಲ್ಲಿ ಕರ್ನಾಟಕ ಕಲಾ ಸನ್ನಿಧಿಯ ಕಾರ್ಯದರ್ಶಿ ದೀಪಕ ಭಟ್ ಕುಂಕಿ ಹಾಗೂ ಸಹ ಕಾರ್ಯದರ್ಶಿ ದಿನೇಶ ಗೌಡ ಪತ್ರಿಕಾಗೋಷ್ಠಿಯಲ್ಲಿದ್ದರು.

Share This
300x250 AD
300x250 AD
300x250 AD
Back to top