ಶಿರಸಿ: 2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಇಲಾಖಾ ಅನುಮೋದಿತ ಸಂಸ್ಥೆಗಳಿಂದ ತೋಟಗಾರಿಕಾ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ಅಳವಡಿಕೆಗಾಗಿ ಮಾರ್ಗಸೂಚಿ ಪ್ರಕಾರ 5 ಎಕರೆವರೆಗಿನ ಪ್ರದೇಶಕ್ಕೆ 90% (ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ರೈತರಿಗೆ)/ 75% (ಇತರೆ ರೈತರಿಗೆ) ಸಹಾಯಧನ ನೀಡಲಾಗುವುದು. 5 ಎಕರೆಗೂ ಮೇಲ್ಪಟ್ಟು ಗರಿಷ್ಠ 12.5 ಎಕರೆವರೆಗಿನ ಪ್ರದೇಶಕ್ಕೆ 45% ಸಹಾಯಧನವನ್ನು ನೀಡಲಾಗುವುದು ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.
ಅಂತೆಯೆ, 2023-24ನೇ ಸಾಲಿನ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ತೆಂಗು ಪ್ರದೇಶ ವಿಸ್ತರಣೆ ಕಾರ್ಯಕ್ರಮವಿದ್ದು, ಇಲಾಖಾ ನರ್ಸರಿಗಳಿಂದ ಗಿಡಗಳನ್ನು ಖರೀದಿ ಮಾಡಿ, ಪ್ರತಿ ಎಕರೆಗೆ 50 ಗಿಡಗಳನ್ನು ನಾಟಿ ಮಾಡಿದಲ್ಲಿ (9*9 ಮೀಟರ್ ಗಳ ಅಂತರದಲ್ಲಿ) ಮಾರ್ಗಸೂಚಿ ಪ್ರಕಾರ ಪ್ರತಿ ಎಕರೆಗೆ 3,690 ರೂಪಾಯಿಗಳ ಸಹಾಯಧನ ನೀಡಲಾಗುವುದು (ಎಲ್ಲಾ ವರ್ಗದ ರೈತರಿಗೆ). ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತಾಲ್ಲೂಕಾ ತೋಟಗಾರಿಕಾ ಇಲಾಖಾ ಕಛೇರಿಯನ್ನು ಸಂಪರ್ಕಿಸಲು ಕೋರಿದೆ.