ಶಿರಸಿ: ಜಿಲ್ಲಾ ರೈತ ಸಂಘ ತಾಲೂಕು ಸಮಿತಿಯಿಂದ ಉಂಚಳ್ಳಿ ಗ್ರಾಮದ ಸುತ್ತಮುತ್ತಲಿನ ರೈತರ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚೆ ಹಾಗೂ ರೈತ ಸಂಘದ ಸಂಘಟನೆಗಾಗಿ ಸಭೆ ಸೇರಲಾಯಿತು. ಇಂದಿನ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೆರಿಯಪ್ಪ ಜಿ ನಾಯ್ಕ ಮಾತನಾಡುತ್ತಾ ರೈತರು ಸಂಘಟಿತರಾಗಿರದ ಕಾರಣ ಅನೇಕ ರೈತರು ಭೂಹಿನರಾಗಿ ಉಳಿದಿದ್ದಾರೆ ರೈತರೆಲ್ಲ ಸಂಘಟನೆಯಲ್ಲಿ ರಾಜಕಾರಣ ಬಿಟ್ಟು ಸಂಘಟಿತರಾಗಬೇಕು ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರೈತ ಸಂಘಟನೆ ಹುಟ್ಟಿದೆ ಈ ಭಾಗದ ಅನೇಕ ರೈತರಿಗೆ 1974ರ ಪೂರ್ವದಲ್ಲಿ ಸಾಗುವಳಿ ಮಾಡುತ್ತಾ ಇದ್ದರು ಸಾಗುವಳಿ ಚೀಟಿ ಇದ್ದು ರೈತರ ಹೆಸರು ಪಹಣಿ ಪತ್ರಿಕೆಯಲ್ಲಿ ಇಲ್ಲದಿರಲು ಅಧಿಕಾರಿಗಳ ನಿರ್ಲಕ್ಷ ಕಾರಣ, ರೈತರ ಕಣ್ಣೀರು ಒರೆಸುವ ಕೆಲಸ ರೈತ ಸಂಘಟನೆಯಿ0ದ ನಡೆಯಬೇಕು ಅದಕ್ಕೆ ನಿಮ್ಮ ಸಹಕಾರ ಬೇಕು, ಹಿರಿಯ ರೈತರ ಸಲಹೆ ಸೂಚನೆ ತೆಗೆದುಕೊಂಡು ಮುಂದುವರಿಯುತ್ತೇವೆ ಎಂದರು.