Slide
Slide
Slide
previous arrow
next arrow

ಪರಿಶುದ್ಧ ಪರಿಸರ ನಮ್ಮ ಬದುಕಿನ ಧ್ಯೇಯವಾಗಬೇಕು : ಹೊನ್ನಪ್ಪ ನಾಯಕ

300x250 AD

ಕುಮಟಾ: ಅಹಿಂಸೆ ಮತ್ತು ಸೋದರತೆ ಪರಿಪಾಲನೆಯೇ ನಾವು ರಾಷ್ಟ್ರಪಿತ ಗಾಂಧೀಜಿಗೆ ಸಲ್ಲಿಸುವ ಗೌರವ ಪರಿಶುದ್ಧ ಪರಿಸರವು ನಮ್ಮ ಬದುಕಿನ ಧ್ಯೇಯವಾಗಬೇಕಾಗಿದೆ. ಎಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೊನ್ನಪ್ಪ ಎನ್. ನಾಯಕ ನುಡಿದರು.

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ ಗಾಂಧೀಜಯಂತಿ ಸ್ವಚ್ಚತಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗಾಂಧೀಜಿಯವರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕೆಂದರು.

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ಮುಖ್ಯಾಧ್ಯಾಪಕ ರೋಹಿದಾಸ ಎಸ್.ಗಾಂವಕರ ಮಾತನಾಡಿ ಗಾಂಧೀಜಿ ನಡೆದು ಬಂದ ದಾರಿ ಮತ್ತು ಜೀವನದಲ್ಲಿ ಅಳವಡಿಸಿಕೊಂಡ ಉನ್ನತ ಆದರ್ಶ ಗುಣಗಳಿಂದ ಮಹಾತ್ಮ ಎನಿಸಿಕೊಂಡಿದ್ದಾರೆ ಎಂದರು.

300x250 AD

ವಿದ್ಯಾರ್ಥಿನಿ ಸುವರ್ಣ ಭಂಡಾರಕರ್ ಮಹಾತ್ಮಾಗಾಂಧಿ ಮತ್ತು ಲಾಲ್‌ಬಹುದ್ದೂರ ಶಾಸ್ತ್ರೀಯವರ ಕುರಿತು ಭಾಷಣ ಮಾಡಿದರು ಕಾರ್ಯಕ್ರಮದ ವೇದಿಕೆಯಲ್ಲಿ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೇಕರ್, ನಾಗರಾಜ ನಾಯಕ, ಬಾಲಚಂದ್ರ ನಾಯಕ, ಇಂದಿರಾ ನಾಯಕ, ಜಾನಕಿ ಗೊಂಡ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಮಹಾತ್ಮಾಗಾಂಧಿ ಆಂಗ್ಲಮಾಧ್ಯಮ ಪೂರ್ವಪ್ರಾಥಮಿಕ ಶಾಲೆಯ ಸುಮನ್ ಫರ್ನಾಂಡೀಸ್, ಜಯಶ್ರೀ ಪಟಗಾರ, ತನುಜಾ ಹರಿಕಂತ್ರ, ಮಂಗಲಾ ಪಟಗಾರ, ನಾಗರತ್ನ ನಾಯ್ಕ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮವು ಚೈತನ್ಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವಿದ್ಯಾರ್ಥಿ ಪ್ರತಿನಿಧಿ ಶಿಕ್ಷಕ ಎನ್. ರಾಮು ಹಿರೇಗುತ್ತಿ ಸ್ವಾಗತಿಸಿದರು, ಮಹಾದೇವ ಬಿ ಗೌಡ ವಂದಿಸಿದರು. ಗ್ರಾಮ ಪಂಚಾಯತ ಹಿರೇಗುತ್ತಿ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರ ಆವರಣದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡರು.

Share This
300x250 AD
300x250 AD
300x250 AD
Back to top