Slide
Slide
Slide
previous arrow
next arrow

ಭಗವಂತ ಮನುಷ್ಯನನ್ನು ಸೃಷ್ಟಿಸಿರುವುದೇ ಸಮಾಜದ ಒಳಿತಿಗಾಗಿ : ಹರಿಪ್ರಕಾಶ ಕೋಣೆಮನೆ

300x250 AD

ಶಿರಸಿ: ಜಾತಿ ವ್ಯವಸ್ಥೆಯನ್ನು ಹುಟ್ಟಿನಿಂದ ತಿಳಿಯದೇ ಗುಣದಿಂದ ತಿಳಿಸುವ ಕೆಲಸವಾಗಬೇಕಿದೆ. ದೇಶದಲ್ಲಿ ಅದೆಷ್ಟೋ ಜಾತಿ-ಸಮಾಜಗಳಿವೆ. ಆಯಾ ಸಮಾಜಕ್ಕೆ ಅದರದ್ದೇ ಆದ ಸ್ಥಾನ‌ಮಾನವಿದೆ. ಜಾತಿ ವ್ಯವಸ್ಥೆ ಇರಬೇಕು. ಆದರೆ, ಅದು ಏಕತೆಯಿಂದ ಕೂಡಿರಬೇಕೇ ವಿನಃ ಪ್ರತ್ಯೇಕವಾಗಬಾರದು. ಭಗವಂತ ನಮ್ಮನ್ನು ಸೃಷ್ಟಿಸಿರುವುದು ಸಮಾಜಕ್ಕೆ ಒಳ್ಳೆಯ ಕಾರ್ಯ ಮಾಡಲು ವಿನಃ ಜಾತಿ ಜಾತಿಯ ನಡುವೆ ಭಿನ್ನಾಭಿಪ್ರಾಯ ಮಾಡುವುದಕ್ಕೆ ಅಲ್ಲ. ನಾಡಿನಲ್ಲಿ ಸಣ್ಣ ಸಮಾಜದವರು ಸಂಘಟಕರಾಗಬೇಕಾಗಿದೆ ಎಂದು ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.

ತಾಲೂಕಿನ ಬನವಾಸಿಯ ನಾಮದೇವ ಕಲ್ಯಾಣ ಮಂಟಪದಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿಯ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನಾಮದೇವ ಶಿಂಪಿ ಮತ್ತು ಭಾವಸಾರ ಕ್ಷತ್ರೀಯ ಸಮಾಜದ ಸಾಧಕರಿಗೆ ರಾಜ್ಯ ಮಟ್ಟದ ವಿಠ್ಠಲಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಸಾವಿರಾರು ಜಾತಿಗಳಿವೆ, ಅದರಲ್ಲಿ ನಾಮದೇವ ಶಿಂಪಿ ಸಮಾಜಕ್ಕೆ ಅದರದ್ದೇ ಆದ ಮಹತ್ವವಿದೆ ಎಂದ ಅವರು, ನಾವೆಲ್ಲರೂ ಸಮಾಜದ ಒಳಿತಿಗಾಗಿ ಚಿಂತನೆ ನಡೆಸಬೇಕು. ನಮ್ಮ ದೇಶದ ಪ್ರತಿ ನೂರು ಕಿಲೋ ಮೀಟರ್ ಅಂತರದಲ್ಲಿ ಒಂದು ಭಾಷೆ, ಜಾತಿ, ಬಣ್ಣ ಹಾಗೂ ಸಂಸ್ಕೃತಿ ಸಂಸ್ಕಾರದ ವ್ಯತ್ಯಾಸವನ್ನು ನಾವು ಕಾಣುತ್ತಿದ್ದೇವೆ. ಅದರಲ್ಲಿ ವೈವಿದ್ಯತೆಯಲ್ಲಿ ಏಕತೆಯನ್ನು ಕಾಣುತ್ತಿದ್ದೇವೆ‌ ಎಂದು ಹೇಳಿದರು.

ಮುಖ್ಯ ಅತಿಥಿಯಾದ ಸಮಾಜ ಸೇವಕಿ ಡಾ. ನಯನಾ ಭಸ್ಮೆ ಮಾತನಾಡಿ, ನಮ್ಮ ಸಮಾಜದ ಅದೆಷ್ಟೋ ಮಂದಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅಂತವರನ್ನು ಸನ್ಮಾನಿಸಲು ಖುಷಿಯಾಗುತ್ತದೆ‌. ಇಂದಿನ ಈ ಸನ್ಮಾನ ಮುಂದಿನ ದಿನಗಳಿಗೆ ಪ್ರೇರಣೆ ನೀಡಲಿದೆ. ಸಾಧಕರ ಪಟ್ಟಿಯಲ್ಲಿ ಮಹಿಳೆಯರು ಹಾಗೂ ಮಕ್ಕಳ ಪಾತ್ರ ಹೆಚ್ಚಿದೆ‌. ಪ್ರಸ್ತುತ ಮಕ್ಕಳ ಕಲಿಕೆ ಅವರ ಹುಟ್ಟಿನಿಂದಲೇ ಆಗುತ್ತಿದೆ‌. ಅಂತಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯತೆ ಇದೆ‌. ಮಕ್ಕಳಲ್ಲಿ ಒತ್ತಡ ಹಾಕದೇ ಸಾಧನೆ ಮಾಡಲು ಅವರಿಗೆ ಇನ್ನಷ್ಟು ಅವಕಾಶ ನೀಡಬೇಕು‌. ಜೀವನದಲ್ಲಿ ಆಸಕ್ತಿ, ಸಹಾಯ ಮನೋಭಾವ ಬೆಳೆಸಿಕೊಳ್ಳಬೇಕು. ಅದರಿಂದ ಇತರರು ಪ್ರೇರಣೆಯಾಗಬೇಕು ಎಂದು ತಿಳಿಸಿದರು.

300x250 AD

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೂರಕ್ಕೂ ಹೆಚ್ಚು ಸಾಧಕರಿಗೆ ವಿಠ್ಠಲ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಸ ಗೊಡ್ಯಾಗೋಳ, ಕಾರ್ಯದರ್ಶಿ ಮಂಜುನಾಥ ರೇಳೆಕರ, ಸಂಚಾಲಕ ಸುಧೀರ್ ನಾಯರ್ ಅವರನ್ನು ಬನವಾಸಿಯ ಶಿಂಪಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಸ್ ಗೊಡ್ಯಾಗೋಳ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ, ನಾಮದೇವ ಶಿಂಪಿ ಸಮಾಜದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಮೃತ್ಯುಂಜಯ ಚೌದರಿ, ಸಂಘಟಕ ಮಂಜುನಾಥ ರೇಳೆಕರ ಮಾತನಾಡಿದರು. ಜಿ.ಎಸ್. ಪಿಳ್ಳೈ ಗ್ರೂಪ್‌ನ ಸಂಸ್ಥಾಪಕಿ ಪೂರ್ಣಿಮಾ ಪಿಳ್ಳೈ, ಬನವಾಸಿ ಗ್ರಾಪಂ ಉಪಾಧ್ಯಕ್ಷ ಸಿದ್ದು ನೆರಗಲ್, ಬನವಾಸಿ ಶಿಂಪಿ ಸಮಾಜ ಅಧ್ಯಕ್ಷ ಮಧುಕರ ಮಾಳವದೆ ವೇದಿಕೆಯಲ್ಲಿ ಇದ್ದರು.

Share This
300x250 AD
300x250 AD
300x250 AD
Back to top