ಕುಮಟಾ: ಗಾಂಧಿ ಜಯಂತಿ ನಿಮಿತ್ತ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಡೆಸಿದ್ದ ಮಹಾತ್ಮಾ ಗಾಂಧೀಜಿಯವರ ವಿವಿಧ ವಿಷಯಗಳ ಕುರಿತಾದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಇಲ್ಲಿಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಗದು ಬಹುಮಾನದೊಂದಿಗೆ ಮೂರು ಶ್ರೇಯಾಂಕಗಳನ್ನು ಗಳಿಸಿದ್ದಾರೆ. ರಶ್ಮಿ ಪಟಗಾರ ಪ್ರಥಮ, ತೇಜಾ ನಾಯ್ಕ ದ್ವಿತೀಯ ಹಾಗೂ ಬಿಂದು ಅವಧಾನಿ ತೃತೀಯ ಸ್ಥಾನ ಪಡೆದಿದ್ದರೆ, ರಶ್ಮಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪ್ರಬಂಧ ಸ್ಪರ್ಧೆ: ಬಿ.ಎಡ್ ವಿದ್ಯಾರ್ಥಿನಿಯರಿಗೆ ಬಹುಮಾನ
