ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಸಂಕಲ್ಪಿಸಿದ ಚಾತುರ್ಮಾಸ್ಯ ವ್ರತಾಚರಣೆಯ ಸೀಮೋಲ್ಲಂಘನ ಶುಕ್ರವಾರ ನಡೆಯಿತು.
ಶಾಲ್ಮಲಾ ನದಿಗೆ ಪೂಜೆ ಸಲ್ಲಿಸಿದ ಶ್ರೀಗಳು, ಸೋಂದಾ ಸದಾಶಿವ ದೇವಸ್ಥಾನಕ್ಕೂ ತೆರಳಿ ಪೂಜೆ ನಡೆಸಿದರು. ಈ ವೇಳೆ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಹಳ್ಳಿ, ಜಿ.ವಿ.ಹೆಗಡೆ, ಉಲ್ಲಾಸ ನಾಯ್ಕ, ವಿ.ಬಾಲಚಂದ್ರ ಶಾಸ್ತ್ರೀ, ಚಿನ್ಮಯ ಜೋಶಿ, ಭರತ್ ಭಟ್ಟ ಇತರರು ಇದ್ದರು.