ಕುಮಟಾ: ವ್ಯಕ್ತಿಯೋರ್ವರ ಮೇಲೆ ಈರ್ವರು ಕ್ಷÄಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ತಾಲೂಕಿನ ಅಳ್ವೆದಂಡೆಯ ನಿವಾಸಿ ಶಂಕರ ಸೋಡನ್ಕರ್ ಹಲ್ಲೆಗೊಳಗಾದ ವ್ಯಕ್ತಿ. ಇವರು ಅಳ್ವೆದಂಡೆಯ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ತೆರಳಿದ ಅಣ್ಣನ ದೋಣಿ ಬಂದಿರುವುದರಿAದ ಅಣ್ಣನಿಗೆ ಸಹಕರಿಸಲು ನಿಂತಿರುವಾಗ ಅಳ್ವೆದಂಡೆ ನಿವಾಸಿ ಹಾಗೂ ಆರೋಪಿತರಾದ ದರ್ಶನ ತಾರಿ ಹಾಗೂ ಸುಧಾಕರ ತಾರಿ ಶಂಕರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಆತನ ಕಾಲು ಮರಿಯಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ದೂರಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಇವತ್ತಿಗೆ ಒಂದು ತಿಂಗಳು ಗತಿಸಿದರೂ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ನೊಂದ ಸಂತ್ರಸ್ತ ಶಂಕರ ಸೋಡನ್ಕರ್ ಅವರು ಆರೋಪಿಸಿದ್ದಾರೆ.
ಹಳೇ ದ್ವೇಷಕ್ಕೆ ಆರೋಪಿತರು ಇಂಥ ಅಪರಾಧ ಕೃತ್ಯವೆಸಗಿದ್ದು, ಆರೋಪಿತರನ್ನು ಬಂಧಿಸಬೇಕಾದ ಪೊಲೀಸ್ ಅಧಿಕಾರಿಗಳು ಸುಮ್ಮನಿರುವುದನ್ನು ಗಮನಿಸಿದರೆ ಹಲವು ಅನುಮಾನಗಳು ಮೂಡುವಂತಾಗಿದೆ. ಸಣ್ಣಪುಟ್ಟ ಪ್ರಕರಣಗಳಲ್ಲೂ ಆರೋಪಿತರನ್ನು ಕೆಲವೇ ಗಂಟೆಯಲ್ಲಿ ಬಂಧಿಸುವ ಪೊಲೀಸರಿಗೆ ಮಾರಣಾಂತಿಕ ಪ್ರಕರಣಕ್ಕೆ ಸಂಬAಧಿಸಿದ ಆರೋಪಿಯನ್ನು ಬಂಧಿಸಲು ಸಾಧ್ಯವಾಗದೇ ಇರುವುದನ್ನು ನೋಡಿದರೆ ಪೊಲೀಸರ ಮೇಲೆ ಪ್ರಬಲ ರಾಜಕೀಯ ಒತ್ತಡವಿರುವ ಅನುಮಾನ ಕೂಡ ಮೂಡುವಂತಾಗಿದೆ. ಹಾಗಾಗಿ ಪೊಲೀಸ್ ವರೀಷ್ಠಾಧಿಕಾರಿಯಾದ ವಿಷ್ಣುವರ್ಧನ ಅವರು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸಬೇಕೆಂದು ನೊಂದ ಸಂತ್ರಸ್ತ ಶಂಕರ ಸೋಡನ್ಕರ್ ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.