ಸಿದ್ದಾಪುರ: ಬೆಂಗಳೂರಿನ ಸುಚಿತ್ರಾ ಸಿನಿಮಾ ಎಂಡ್ ಕಲ್ಚರಲ್ ಅಕಾಡೆಮಿಯಲ್ಲಿ ಇಂಡಿಯನ್ ಫಿಲ್ಮ್ ಹೌಸ್(IFH) ನಡೆಸಿದ ರಾಷ್ಟ್ರಮಟ್ಟದ ಕಿರು ಚಿತ್ರೋತ್ಸವ-2023 ಇವೆಂಟ್’ನಲ್ಲಿ ಸಿದ್ದಾಪುರದ ಮುಂಗ್ರಾಣಿ ಪ್ರೋಡಕ್ಷನ್ ಯೂಟ್ಯೂಬ್ ಚಾನೆಲ್, ‘ನೊವೆಲ್(Novel)’ ಕಿರುಚಿತ್ರವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಉತ್ತಮ ನಟ, ಉತ್ತಮ ನಟಿ, ಉತ್ತಮ ನಿರ್ದೇಶಕ ಹಾಗೂ ಉತ್ತಮ ಚಿತ್ರಕಥೆ ವಿಭಾಗಗಳಲ್ಲಿ ‘ನೋವೆಲ್’ ಕಿರುಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದು, ನಿರ್ದೇಶಕ ಹಾಗೂ ಚಿತ್ರಕಥೆ ವಿಭಾಗದಲ್ಲಿ ವಿನಯ್ ಮುಂಗ್ರಾಣಿ, ನಟ ವಿಭಾಗದಲ್ಲಿ ರಾಕೇಶ್ ಭಟ್, ನಟಿ ವಿಭಾಗದಲ್ಲಿ ಬಿ.ಎಸ್ ಸಿಂಧೂರಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಕಿರುಚಿತ್ರದಲ್ಲಿ ಭವ್ಯ ಹಳೆಯೂರು, ಪೂಜಾ ಹಂದ್ರಾಳ, ಸಮರ್ಥ ಭಟ್ ಕೂಡ ನಟಿಸಿದ್ದು, ಪ್ರಶಸ್ತಿಗಳನ್ನು ಪಡೆದ ಯುವಕರ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
YouTube Link: https://youtu.be/dEIxOda0b6I?si=xn7M75lze42kmQnk