ಶಿರಸಿ: ತಾಲೂಕಿನ ಗಿಳಿಗುಂಡಿಯ ಸ್ವರ ಸಂವೇದನಾ ಪ್ರತಿಷ್ಠಾನವು ಅಜ್ಜೀಬಳದ ಶ್ರೀಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಂಭುಲಿಂಗೇಶ್ವರ ಟ್ರಸ್ಟ್ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಅ.2, ಸೋಮವಾರದಂದು ಮಧ್ಯಾಹ್ನ 3-30 ರಿಂದ ರಾತ್ರಿ 8 ರವರೆಗೆ ‘ನಾದಪೂಜೆ’ ಕಾರ್ಯಕ್ರಮ ಹಮ್ಮಿಕೊಂಡಿದೆ.
ಗಾಯನದಲ್ಲಿ ರವಿಕಿರಣ ಮಣಿಪಾಲ, ಮಿಥುನ ಚಕ್ರವರ್ತಿ ಉಜಿರೆ, ವಾಣಿ ಹೆಗಡೆ ಯಲ್ಲಾಪುರ ಪಾಲ್ಗೊಳ್ಳುವರು. ಸಹ ಕಲಾವಿದರಾಗಿ ತಬಲಾದಲ್ಲಿ ಭಾರವಿ ದೇರಾಜೆ ಸುರತ್ಕಲ್, ವಿಜಯೇಂದ್ರ ಹೆಗಡೆ ಅಜ್ಜೀಬಳ, ಹಾರ್ಮೋನಿಯಂನಲ್ಲಿ ಪ್ರಸಾದ ಕಾಮತ್ ಉಡುಪಿ, ಸಾರಂಗಿಯಲ್ಲಿ ಗುರುಪ್ರಸಾದ ಹೆಗಡೆ ಗಿಳಿಗುಂಡಿ ಪಾಲ್ಗೊಳ್ಳುವರು ಎಂದು ಸ್ವರ ಸಂವೇದನಾ ಟ್ರಸ್ಟ್‌ನ ಅಧ್ಯಕ್ಷ ರಾಜಾರಾಮ ಹೆಗಡೆ ಬಿಳೆಕಲ್ ತಿಳಿಸಿದ್ದಾರೆ.