ಶಿರಸಿ: ತಾಲೂಕಿನ ತಾರಗೋಡ ಹಾಲು ಉತ್ಪಾದಕರ ಸಂಘ ನಿಯಮಿತ ಇದರ 2022-23ನೇ ಸಾಲಿನ 38 ನೇಯ ವಾರ್ಷಿಕ ಸರ್ವ ಸಾಧಾರಣ ಸಭೆಯು ರವಿವಾರ ಎಚ್.ಆರ್.ಡಿ.ಎ ಸೊಸೈಟಿಯ ಸಭಾಭವನದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ನಾರಾಯಣ ಹೆಗಡೆ ನಡಗೋಡ ಮಾತನಾಡಿ, ಸಂಘದ ವಾರ್ಷಿಕ ವರದಿಯನ್ನು ವಾಚಿಸಿ, ಸಂಘವು 2022-23ನೇ ಸಾಲಿನಲ್ಲಿ 2,62,533.52 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆಎಮ್‌ಎಫ್ ಹಾಗೂ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ, ಕದಂಬ ಸೊಸೈಟಿಯ ಅಧ್ಯಕ್ಷ ಹಾಗೂ ಸಂಘದ ನಿರ್ದೇಶಕ ಶಂಭುಲಿಂಗ ಗಣಪತಿ ಹೆಗಡೆ ಹಾಗೂ ಹುಳಗೋಳ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಘುಪತಿ ಶಿವರಾಮ ಭಟ್ಟ ನಡಗೋಡ ಎಚ್.ಎಸ್.ಬಿ ಬೈರುಂಬೆ ಹಾಗೂ ಹಾಫ್‌ಕಾಮ್‌ನ ನಿರ್ದೇಶಕ ಶಾಂತಾರಾಮ ಹೆಗಡೆ ಅಂಬಳಿಕೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಶು ವೈದ್ಯರಾಗಿ ಸೇವೆ ಸಲ್ಲಿಸಿದ ಡಾ.ಗೋಪಾಲ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸಂಘದ ಸದಸ್ಯರಿಗೆ ಹಾಲು ಕ್ಯಾನ್ ವಿತರಿಸಲಾಯಿತು. ಸಂಘದ ಅಧ್ಯಕ್ಷ ನಾರಾಯಣ ಹೆಗಡೆ ನಡಗೋಡ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಗುರುಪ್ರಸಾದ ಹೆಗಡೆ ನಿರೂಪಿಸಿದರು. ಸಂಘದ ನಿರ್ದೇಶಕ ಉದಯ ಹೆಗಡೆ ವಂದಿಸಿದರು. ಸಭೆಯಲ್ಲಿ ಹಿರಿಯ ಸದಸ್ಯರಾದ ವೆಂಕಟ್ರಮಣ ಹೆಗಡೆ ಕುಂಬ್ರಿಗದ್ದೆ, ಶಿವರಾಮ ಹೆಗಡೆ ನಡಗೋಡ, ರಾಜಾರಾಮ ಹೆಗಡೆ ಕಡವೆ, ಅಶೋಕ ನಾಯ್ಕ ಗುಡೇಕೊಪ್ಪ ಇದ್ದರು.