ಹ್ಯಾಂಗ್‌ಝೂ: ಇಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ನಲ್ಲಿ ಭಾರತ ಸೈಲಿಂಗ್ ಸ್ಪರ್ಧೆಯಲ್ಲಿ ಮತ್ತೊಂದು ಪದಕ ತನ್ನದಾಗಿಸಿಕೊಂಡಿದೆ. ಪುರುಷರ ವಿಂಡ್‌ಸರ್ಫರ್ ಆರ್‌ಎಸ್ ಎಕ್ಸ್ ಈವೆಂಟ್‌ನಲ್ಲಿ ಇಬಾದ್ ಅಲಿ ಕಂಚಿನ ಪದಕ ಜಯಿಸಿದ್ದಾರೆ. ಇದಕ್ಕೂ ಮುನ್ನ ನಡೆದ ಮಹಿಳೆಯರ ಸಿಂಗ್ಸಲ್ಸ್ ವಿಭಾಗದ ಸೈಲಿಂಗ್ ಸ್ಪರ್ಧೆಯ ILCA4 ರೇಸ್ 11ನಲ್ಲಿ ನೇಹಾ ಠಾಕೂರ್ ಬೆಳ್ಳಿ ಪದಕ ಜಯಿಸಿದ್ದರು. ಒಟ್ಟಾರೆ ಮಂಗಳವಾರ ಭಾರತ ಎರಡು ಪದಕ ಜಯಿಸಿದಂತಾಗಿದೆ. ಸದ್ಯ ಭಾರತ 13 ಪದಕ ಗೆದ್ದಿದೆ.
ಮಂಗಳವಾರ ನಡೆದ ಫೈನಲ್ ಸುತ್ತಿನ ವಿಂಡ್‌ಸರ್ಫರ್ ಆರ್‌ಎಸ್: ಎಕ್ಸ್ ಈವೆಂಟ್‌ನಲ್ಲಿ ಇಬಾದ್ ಅಲಿ 52 ಅಂಕದೊಂದಿಗೆ ಕಂಚಿನ ಪದಕ್ಕೆ ಕೊರಳೊಡ್ಡಿದರು. ಇದಕ್ಕೂ ಮುನ್ನ ಸೈಲಿಂಗ್ ವಿಭಾಗದಲ್ಲಿ ಬಾಲಕಿಯರ ಡಿಂಗಿ ಐಎಲ್ ಸಿಎ4 ಸ್ಪರ್ಧೆಯಲ್ಲಿ ನೇಹಾ ಠಾಕೂರ್ 11 ರೇಸ್ಗಳಲ್ಲಿ ಒಟ್ಟು 27 ಅಂಕಗಳಿಸಿ ಬೆಳ್ಳಿ ಗೆದ್ದು ಈ ಸ್ಪರ್ಧೆಯಲ್ಲಿ ಭಾರತಕ್ಕೆ ಐತಿಹಾಸಿಕ ಪದಕದ ಖಾತೆ ತೆರೆದಿದ್ದರು. ಥಾಯ್ಲೆಂಡ್‌ನ ನೊಪಸೋರ್ನ್ ಖುನ್ಬೂಂಜಾನ್ 16 ಅಂಕಗಳೊಂದಿಗೆ ಚಿನ್ನ ಪದಕ, ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ 28 ಅಂಕಗಳೊಂದಿಗೆ ಕಂಚಿನ ಪದಕ್ಕೆಎ ತೃಪ್ತಿಪಟ್ಟಿದ್ದರು.