Slide
Slide
Slide
previous arrow
next arrow

ತಾಳಮದ್ದಲೆ ಸ್ಪರ್ಧೆ; ಆನಗೋಡು ತಂಡ, ಯಕ್ಷಗೆಜ್ಜೆ ತಂಡ ಪ್ರಥಮ

300x250 AD

ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಯಕ್ಷ ಶಾಲ್ಮಲಾ ಸಂಸ್ಥೆ ಹಮ್ಮಿಕೊಂಡ ಎರಡು ದಿನಗಳ ತಾಳಮದ್ದಲೆಯಲ್ಲಿ ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಸ್ಪರ್ಧೆ ನಡೆದವು.

ಕಿರಿಯರ ವಿಭಾಗದಲ್ಲಿ ಯಕ್ಷಗೆಜ್ಜೆ ತಂಡ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ತೃತೀಯ ಸ್ಥಾನವನ್ನು ಹಿ.ಪ್ರಾ ಶಾಲೆ ಗುಂದ ತನ್ನದಾಗಿಸಿಕೊಂಡಿದೆ. ಹಿರಿಯರ ವಿಭಾಗದಲ್ಲಿ ಯಕ್ಷ ಮಿತ್ರ ಮಂಡಳಿ ಆನಗೋಡು ಪ್ರಥಮ, ದ್ವಿತೀಯ ಸ್ಥಾನವನ್ನು ಪ್ರೌಢಶಾಲೆ ನಂದೊಳ್ಳಿ, ತೃತೀಯ ಪ್ರೌಢಶಾಲೆ ಜಡ್ಡಿಗದ್ದೆ ತಂಡ ಪಡೆದುಕೊಂಡಿದೆ.

300x250 AD

ವಿಜೇತ ತಂಡಗಳಿಗೆ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಬಹುಮಾನ ವಿತರಿಸಿ, ಶುಭಕೋರಿದರು. ಎರಡೂ ವಿಭಾಗದಿಂದ 27 ತಂಡಗಳು ಭಾಗವಹಿಸಿದ್ದವು. ಯಕ್ಷ ಶಾಲ್ಮಲಾದ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ, ಎಂ.ಎನ್.ಹೆಗಡೆ ಹಳವಳ್ಳಿ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top