ಶಿರಸಿ: ಸಾರ್ವಜನಿಕರಲ್ಲಿ ಆರೋಗ್ಯ ಪ್ರಜ್ಞೆ ಜಾಗೃತಿಗೊಳಿಸುವ, ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಪೂರ್ವದಲ್ಲೇ ರೋಗ ಪತ್ತೆ ಹಚ್ಚುವ ಹಾಗೂ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವ ಉದ್ದೇಶದಿಂದ ಸೆ. 27 ರಂದು ಬುಧವಾರ ನಗರದ ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ತಿಳಿಸಿದರು.
ಸೋಮವಾರ ಸ್ಕೊಡ್‌ವೆಸ್ ಸಂಸ್ಥೆಯ ಯೋಜನಾ ಅನುಷ್ಠಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಾತನಾಡಿದ ಅವರು, ದೇಸಾಯಿ ಫೌಂಡೇಶನ್ ಟ್ರಸ್ಟ್ ಗುಜರಾತ್, ಸ್ಕೊಡವೆಸ್ ಸಂಸ್ಥೆ ಶಿರಸಿ, ಎಸ್.ಎಸ್ ಸ್ಪರ್ಶ್ ಹಾಸ್ಪಿಟಲ್ ಬೆಂಗಳೂರು, ರೋಟರಿ ಕ್ಲಬ್ ಶಿರಸಿ, ಗಣೇಶ ನೇತ್ರಾಲಯ ಶಿರಸಿ ಹಾಗೂ ಟಿ.ಎಸ್.ಎಸ್ ಹಾಸ್ಪಿಟಲ್ ಇವರ ಸಹಯೋಗ ಹಾಗೂ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಶಿರಸಿ ವಿಭಾಗ ಮತ್ತು ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘದ ಸಹಕಾರದಲ್ಲಿ ಹಮ್ಮಿಕೊಂಡಿರುವ ಈ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಹೃದಯ ಸಂಬ0ಧಿ ಕಾಯಿಲೆಗಳ ತಪಾಸಣೆ, ಉಚಿತ ಎಕೋ ಮತ್ತು ಇಸಿಜಿ ಪರೀಕ್ಷೆ, ಸ್ತಿರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ಸಾಮಾನ್ಯ ವೈದ್ಯಕೀಯ ತಪಾಸಣೆ, ಮೂಳೆ ತಪಾಸಣೆ, ನೇತ್ರ ತಪಾಸಣೆ, ಸಾಮಾನ್ಯ ಶಸ್ತಚಿಕಿತ್ಸೆ, ಮಕ್ಕಳ ಸಂಬ0ಧಿಸಿದ ಕಾಯಿಲೆಗಳ ತಪಾಸಣೆ, ನರರೋಗ ತಪಾಸಣೆ ಸೇರಿದಂತೆ ಹಲವಾರು ಕಾಯಿಲೆಗಳನ್ನು ಪರೀಕ್ಷಿಸಿ, ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು.
ರೋಟರಿ ಕ್ಲಬ್‌ನ ಅಧ್ಯಕ್ಷ ರೊ.ಶ್ರೀಧರ ಹೆಗಡೆ ಮಾತನಾಡಿ, ಈ ಶಿಬಿರದಲ್ಲಿ ಎಸ್.ಎಸ್.ಸ್ಪರ್ಶ್ ಹಾಸ್ಪಿಟಲ್ ಬೆಂಗಳೂರಿನ ನರರೋಗ ತಜ್ಞರು, ಕೀಲು ಮತ್ತು ಎಲುಬು ತಜ್ಞರು, ಸಾಮಾನ್ಯ ಶಸ್ತಚಿಕಿತ್ಸೆ ಮತ್ತು ಹೃದಯರೋಗ ಸಂಬ0ಧಿತ ತಜ್ಞ ವೈದ್ಯರುಗಳು ಭಾಗವಹಿಸಲಿದ್ದಾರೆ. ಹಾಗೆಯೇ, ಟಿ.ಎಸ್.ಎಸ್ ಆಸ್ಪತ್ರೆಯ ಡಾ.ಪ್ರಶಾಂತ ಪಾಟೀಲ, ಡಾ.ಅರುಣ ಶೆಟ್ಟಿ, ಡಾ. ಆಶೀಶ್ ಜನ್ನು, ಸ್ತಿರೋಗ ತಜ್ಞರು ಹಾಗೂ ಗಣೇಶ ನೇತ್ರಾಲಯದ ನೇತ್ರ ತಜ್ಞ ಡಾ. ಶಿವರಾಮ ಕೆ.ವಿ ಸೇರಿದಂತೆ 10 ಕ್ಕೂ ಹೆಚ್ಚು ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದ ವ್ಯಕ್ತಿಗಳು ವೈದ್ಯಕೀಯ ಶಿಬಿರದ ಉಪಯೋಗ ಪಡೆಯಬಹುದಾಗಿದ್ದು, ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ವ್ಯಕ್ತಿಗಳು ತಮ್ಮ ಬಳಿ ಇರುವ ವೈದ್ಯಕೀಯ ದಾಖಲೆ ತರಬೇಕು ಎಂದು ತಿಳಿಸಿದರು.
ಎಸ್.ಎಸ್ ಸ್ಪರ್ಶ್ ಹಾಸ್ಪಿಟಲ್‌ನ ಧನಂಜಯ ಕಟ್ಟಿ ಮಾತನಾಡಿ, ಶಿಬಿರದಲ್ಲಿ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತಚಿಕಿತ್ಸೆಯ ಅವಶ್ಯಕತೆ ಇರುವ ರೋಗಿಗಳು ಕಂಡುಬ0ದಲ್ಲಿ ಬಿಪಿಎಲ್‌ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಬೆಂಗಳೂರಿನ ಎಸ್.ಎಸ್.ಸ್ಪರ್ಶ ಆಸ್ಪತ್ರೆ ಮೂಲಕ ಉಚಿತ ಅಥವಾ ರಿಯಾಯಿತಿ ದರದಲ್ಲಿ ಶಸ್ತಚಿಕಿತ್ಸೆ ನೀಡಲಾಗುತ್ತದೆ. ಜಿಲ್ಲೆಯ ಬಡ ಕೂಲಿ ಕಾರ್ಮಿಕರು, ರೈತರು, ಸಂಘಟಿತ ಕಾರ್ಮಿಕರು, ವೃದ್ಧರು, ಗರ್ಭೀಣಿ ಸ್ತಿಯರು, ವಿಶೇಷ ಚೇತನರೂ ಸೇರಿದಂತೆ ಎಲ್ಲಾ ಸಾರ್ವಜನಿಕರು ಈ ಶಿಬಿರದ ಉಪಯೋಗ ಪಡೆದುಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ, ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್. ರವಿ ಇದ್ದರು.