ಕಾರವಾರ: ‘ಐಡೆಕ್ಸ್ ಸ್ಪಿಂಟ್’ ಉಪಕ್ರಮದ ಅಡಿಯಲ್ಲಿ ಭಾರತೀಯ ನೌಕಾಪಡೆಗಾಗಿ ‘ಸ್ವದೇಶಿ ಎಂಪ್ರೆಸಾ’ ಅಭಿವೃದ್ಧಿಪಡಿಸಿರುವ ಅಗ್ನಿಶಾಮಕ ರೋಬೋಟ್ ಅನ್ನು ಪ್ರಾಯೋಗಿಕ ಬಳಕೆಗಾಗಿ ಐಎನ್‌ಎಸ್ ವಿಕ್ರಾಂತ್‌ಗೆ ಹಸ್ತಾಂತರಿಸಲಾಗಿದೆ.
ಈ ರೋಬೋಟ್ ಬೆಂಕಿಯ ಜ್ವಾಲೆಗಳನ್ನು ಪತ್ತೆ ಮಾಡುವುದಲ್ಲದೆ, ನೀರು, ಫೋಮ್ ಜೆಟ್, ಸ್ಪ್ರೇ ಬಳಸಿ ಬೆಂಕಿಯನ್ನು ನಂದಿಸುವ ಮೂಲಕ ಅಪಾಯಗಳಿಂದ ಪಾರು ಮಾಡಲಿದೆ. ಸದ್ಯ ಭಾರತೀಯ ನೌಕಾಪಡೆಯು ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಳಿಸಿದ ಬಳಿಕ ವಿಮಾನವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯ ಸೇರಿದಂತೆ ತನ್ನ ಅತಿದೊಡ್ಡ ಯುದ್ಧನೌಕೆಗಳಲ್ಲಿ ಈ ಸ್ವದೇಶಿ ಅಗ್ನಿಶಾಮಕ ರೋಬೋಟ್‌ಗಳನ್ನು ಶೀಘ್ರದಲ್ಲೇ ನಿಯೋಜಿಸಲಿದೆ.
ಈ ಹೈಟೆಕ್ ರೋಬೋಟ್‌ಗಳಿಗೆ ಈಗಾಗಲೇ ವಿದೇಶಿ ನೌಕಾಪಡೆಗಳಿಂದಲೂ ಬೇಡಿಕೆ ಬಂದಿದ್ದು, ರಕ್ಷಣಾ ವಲಯದಲ್ಲಿ ‘ಮೇಡ್ ಇನ್ ಇಂಡಿಯಾ’ಗೆ ಇದು ಉತ್ತೇಜನ ನೀಡಲಿದೆ ಎಂದು ನೌಕಾಪಡೆಯ ಪ್ರಕಟಣೆ ತಿಳಿಸಿದೆ.