
ಮುಂಡಗೋಡ : ತಾಲೂಕಿನ ನಾಗನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಅಂದಲಗಿ ಸರಕಾರಿ ಪ್ರೌಢಶಾಲೆಗೆ ಶಾಸಕ ಶಿವರಾಮ ಹೆಬ್ಬಾರ್ ತಮ್ಮ ವಿ.ಆಯ್.ಎನ್.ಪಿ (ವಿಂಪ್) ಇನ್ಪ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿ.ಎಸ್.ಆರ್ ಕಾರ್ಯಚಟುವಟಿಕೆಗಳ ಅಡಿಯಲ್ಲಿ ಕೊಡುಗೆ ನೀಡಿದ ‘ಸೌರಶಕ್ತಿ ಆಧಾರಿತ ಸ್ಮಾರ್ಟ್ ಕ್ಲಾಸ್’ ಅನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವಿ.ಎಸ್.ಪಾಟೀಲ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರವಿಗೌಡ ಪಾಟೀಲ್, ಪ್ರಮುಖರಾದ ದೇವು ಪಾಟೀಲ್, ಸಿದ್ದು ಹಡಪದ, ಮಾರುತಿ ಬನವಾಸಿ ಸೇರಿದಂತೆ ಸ್ಥಳೀಯ ಮುಖಂಡರು ಸೇಲ್ಕೊ ಸೋಲಾರ್ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.