Slide
Slide
Slide
previous arrow
next arrow

ತಾಮ್ರಗೌರಿ ದೇವಸ್ಥಾನದಲ್ಲಿ ‘ಸ್ವಯಂವರ ಪಾರ್ವತಿ ಪಾರಾಯಣ ಜಪ ಹೋಮ’

300x250 AD

ಗೋಕರ್ಣ: ಶ್ರೀಕ್ಷೇತ್ರ ಗೋಕರ್ಣದಲ್ಲಿ ಸಾಕಷ್ಟು ದೇವಾಲಯಗಳಿದ್ದು, ಅದರಲ್ಲಿ ತಾಮ್ರಗೌರಿ (ಪಾರ್ವತಿ) ದೇವಸ್ಥಾನವು ಒಂದು. ಗೌರಿ ತದಿಗೆಯ ಪ್ರಯುಕ್ತ ದೇವಸ್ಥಾನದ ಚಂದ್ರಶಾಲೆಯಲ್ಲಿ ಐತಳ ಕೃಷ್ಣ ಭಟ್‌ರ ನೇತೃತ್ವದಲ್ಲಿ ವಾಡಿಕೆಯಂತೆ ಲೋಕಕಲ್ಯಾಣಾರ್ಥವಾಗಿ ದೇವಸ್ಥಾನದ ವತಿಯಿಂದ ವಿಶೇಷ ‘ಸ್ವಯಂವರ ಪಾರ್ವತಿ ಪಾರಾಯಣ ಜಪ ಹೋಮ’ ನಡೆಯಿತು.

ತಾಮ್ರಗೌರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ರಾಮಚಂದ್ರ ಗೋಪಿ, ಅರ್ಚಕ ಮಧುರಲತ ತಾಮ್ರಗೌರಿ ದಂಪತಿಗಳ ಯಜಮಾನತ್ವದಲ್ಲಿ ಸುಮಾರು 10 ಋತಿಜ್ವರ ವೇದಘೋಷಣೆಯೊಂದಿಗೆ ವಾರ್ಷಿಕ ಕಾರ್ಯಕ್ರಮ ಸಾಂಗವಾಗಿ ನಡೆಯಿತು. ಈ ಸಂದರ್ಭದಲ್ಲಿ ಇಲ್ಲಿ ಪಾಲಗೊಂಡಿದ್ದ ಭಕ್ತರಿಗೆ ಪ್ರಸಾದ ವಿತರಿಸಿ ಧಾರ್ಮಿಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.

300x250 AD
Share This
300x250 AD
300x250 AD
300x250 AD
Back to top