Slide
Slide
Slide
previous arrow
next arrow

ಸೆಕೆಂಡರಿ ಹೈಸ್ಕ್ಕೂಲ್ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

300x250 AD

ಗೋಕರ್ಣ: 2023-24 ನೇ ಸಾಲಿನ ಸರಕಾರಿ ಪ್ರೌಢಶಾಲೆ ಬೆಲೆಗದ್ದೆ ತದಡಿ ಇವರ ಸಹಯೋಗದಲ್ಲಿ ಶ್ರೀಮತಿ ಸುಧಾಪೈ ನಾರಾಯಣ ಕ್ರೀಡಾಂಗಣ ಗೋಕರ್ಣದಲ್ಲಿ ನಡೆದ ಕುಮಟಾ ತಾಲೂಕಾ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಯೋಗಾಸನದಲ್ಲಿ ರೋಹಿತ ಎಸ್ ಅಂಬಿಗ, ಸಿಂಚನಾ ಟಿ ಗೌಡ ಗುಂಡು ಎಸೆತ ದ್ವಿತೀಯ, ಅನುಷಾ ಪಿ ಹರಿಕಂತ್ರ ಎತ್ತರ ಜಿಗಿತ ದ್ವಿತೀಯ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ರಕ್ಷಿತಾ ಆರ್ ಹರಿಕಂತ್ರ 1500ಮೀ ಓಟದಲ್ಲಿ ತೃತೀಯ, ಜ್ಯೋತಿ ಬಿ ಗೌಡ ಎತ್ತರ ಜಿಗಿತ ತೃತೀಯ ಸ್ಥಾನ ಹಾಗೂ ಗುಂಪು ವಿಭಾಗದಲ್ಲಿ ಬಾಲಕರ ಕಬಡ್ಡಿ ದ್ವಿತೀಯ ಸ್ಥಾನ ಪಡೆದಿದೆ.

ಮಕ್ಕಳು ಈ ಅಭೂತಪೂರ್ವ ಸಾಧನೆಗೈದು ಶಾಲೆಗೆ ಕೀರ್ತಿ ತಂದಿರುತ್ತಾರೆ. ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕರಾದ ನಾಗರಾಜ ನಾಯಕರವರಿಗೆ ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ, ಉಪಾಧ್ಯಕ್ಷ ಶ್ರೀಕಾಂತ ನಾಯಕ, ಕಾರ್ಯದರ್ಶಿ ಮೋಹನ ಬಿ ಕೆರೆಮನೆ ಹಾಗೂ ಸದಸ್ಯರು, ಶಾಲೆಯ ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್ ಗಾಂವಕರ ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರಾದ ಶಾಂತಾ ಎನ್ ನಾಯಕ, ಹಿರೇಗುತ್ತಿ ಬ್ರಹ್ಮ ಜಟಕ ಯುವಕ ಸಂಘದ ಅಧ್ಯಕ್ಷ ಸಣ್ಣಪ್ಪ ಮಾರುತಿ ನಾಯಕ & ಸದಸ್ಯರು ಹಾಗೂ ಊರಿನ ನಾಗರಿಕರು ಅಭಿನಂದನೆ ಸಲ್ಲಿಸಿ ಮುಂದಿನ ಹಂತಕ್ಕೆ ಶುಭ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top