• Slide
    Slide
    Slide
    previous arrow
    next arrow
  • ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿಗೆ ಸೆ.18ರ ಬದಲು ಸೆ.19ರಂದು ರಜೆ ಘೋಷಣೆ: ಡಿಸಿ ಆದೇಶ

    300x250 AD

    ಶಿರಸಿ: ಗಣೇಶ ಹಬ್ಬಕ್ಕೆ ಸೆ.18ರಂದು ಸಾರ್ವತ್ರಿಕ ರಜೆ ಇದ್ದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಗೊಂದಲ ಸೃಷ್ಟಿಯಾಗಿದ್ದು, ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿಗೆ ಸೆ.19ರಂದು ರಜೆ ಘೋಷಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಕಡೆ ಸೆಪ್ಟೆಂಬರ್ 19 ರಂದು ಮಂಗಳವಾರ ಗಣೇಶ ಚತುರ್ಥಿಯ ಆಚರಣೆ ನಡೆಯಲಿರುವುದರಿಂದ ಈ ಹಿಂದೆ ನೀಡಿದ್ದ ಸರ್ಕಾರಿ ರಜೆಯ ಬದಲು ಸೆಪ್ಟೆಂಬರ್ 19 ರಂದು ಮಂಗಳವಾರ ರಜೆ ಘೋಷಣೆ ಮಾಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

    ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಮತ್ತು ಸರ್ಕಾರಿ ನೌಕರರ ಸಂಘದ ವತಿಯಿಂದ ಬರೆಯಲಾದ ಪತ್ರವನ್ನು ಉಲ್ಲೇಖಿಸಿ ರಜಾ ದಿನದಲ್ಲಿ ಬದಲಾವಣೆ ಮಾಡುವಂತೆ  ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸಚಿವಾಲಯದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದರು.

    300x250 AD

    ಈ ಮನವಿಯನ್ನು ಪುರಸ್ಕರಿಸಿದ ರಾಜ್ಯ ಸರ್ಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರದ ಬದಲು ಮಂಗಳವಾರ ಗಣೇಶ ಚತುರ್ಥಿ ಸಂಬಂಧಿಸಿದಂತೆ ಸರ್ಕಾರಿ  ರಜಾ ದಿನದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಅಧಿಕೃತ ಆದೇಶ ಹೊರಡಿಸಿ, ಸೆ 19 ರಂದು ಸಾರ್ವತ್ರಿಕ ರಜೆ  ಘೋಷಿಸಿದ್ದಾರೆ. ಮತ್ತು ಈ ಹಿಂದೆ ಸೆ. 18 ರಂದು ಘೋಷಿಸಲಾಗಿದ್ದ ರಜೆ ರದ್ದುಗೋಳಿಸಿ, ಸೋಮವಾರ ಕರ್ತವ್ಯದ ದಿನವೆಂದು ಪರಿಗಣಿಸುವಂತೆ  ಸೂಚಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top