• Slide
    Slide
    Slide
    previous arrow
    next arrow
  • ಸೆ.17ಕ್ಕೆ ‘ಕಾನುಘಟ್ಟ’ ಕಾದಂಬರಿ ಬಿಡುಗಡೆ ಸಮಾರಂಭ

    300x250 AD

    ಶಿರಸಿ: ನದಿ, ತೊರೆ ಮೂಲಗಳ ಕಾನು ನಂಬಿಕೆಯ ದೇಸಿ ಜ್ಞಾನ ಹಾಗೂ ಬ್ರಿಟಿಷ್ ವಸಾಹತು ಶಾಹಿಯ ಅರಣ್ಯ ಪ್ರಹಾರಗಳ ಕುರಿತ ಕಥನ ಬರಹಗಾರ ಶಿವಾನಂದ ಕಳವೆಯವರ ‘ಕಾನುಘಟ್ಟ’ ಕಾದಂಬರಿ ಸೆ.17, ಭಾನುವಾರ ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.

    ಖ್ಯಾತ ವಾಗ್ಮಿ ಗಂಗಾವತಿ ಪ್ರಾಣೇಶ್, ಹಿರಿಯ ಸಾಹಿತಿ ನಾ. ಮೊಗಸಾಲೆ, ನಿವೃತ್ತ ಪೊಲೀಸ್ ಅಧಿಕಾರಿ ಡಿ. ಗುರುಪ್ರಸಾದ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ವಿನಯ್ ಜವಳಿ ಅಧ್ಯಕ್ಷತೆ ವಹಿಸುವರು.

    300x250 AD

    ವನವಾಸಿ ಲೋಕದ ಅರಣ್ಯ ನಂಬಿಕೆ, ಸಸ್ಯ ಜ್ಞಾನ, ಜಾನಪದ ಐತಿಹ್ಯ, ಪುರಾತನ ದಾಖಲೆಗಳನ್ನು ಆಧರಿಸಿ ರಚಿಸಿದ ಕೃತಿ ‘ಕಾನುಘಟ್ಟ’ ಕಾದಂಬರಿ. ರಾಜ್ಯದ ಪ್ರಸಿದ್ಧ ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ ಇದನ್ನು ಪ್ರಕಟಿಸಿದೆ. ಈವರೆಗೆ ಅರಣ್ಯ, ಕೃಷಿ, ನೆಲ ಜಲ ಸಂರಕ್ಷಣೆ ಕುರಿತು ಕಳವೆಯವರ 28ಕೃತಿಗಳು ಪ್ರಕಟವಾಗಿವೆ. ಮೂರು ವರ್ಷಗಳ ಹಿಂದೆ ಪ್ರಕಟವಾದ ಮೊದಲ ಕಾದಂಬರಿ ಮಧ್ಯ ಘಟ್ಟ ಓದುಗರ ಮೆಚ್ಚುಗೆ ಗಳಿಸಿ ಹಲವು ಮುದ್ರಣ ಕಂಡಿದೆ, ಇದೀಗ ಕಾನು ಘಟ್ಟ ಕಾದಂಬರಿ ಲೋಕಾರ್ಪಣೆ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಕೃತಿಕಾರ ಶಿವಾನಂದ ಕಳವೆ ಹಾಗೂ ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ ಆಸಕ್ತರನ್ನು ಆಹ್ವಾನಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top