Slide
Slide
Slide
previous arrow
next arrow

ಪಹಣಿ ಪತ್ರಿಕೆ ಮಾಡಿಕೊಡುವಂತೆ ಉಪವಿಭಾಗಾಧಿಕಾರಿಗೆ ಮನವಿ

300x250 AD

ಕುಮಟಾ: ತಾಲೂಕಿನ ಗೋಕರ್ಣದ ಮೊರಬಾ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ನೀಡಲಾದ ನಿವೇಶನಗಳಿಗೆ ಪೋಡಿ ಮಾಡಿ ಪ್ರತ್ಯೇಕ ಪಹಣಿ ಪತ್ರಿಕೆ ಮಾಡಿಕೊಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಅವರ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಿತು.

ಮೊರಬಾ ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್ 4ಅ ಮತ್ತು 4ಬ ಪಿ ಹಿಸ್ಸಾ 2ರಿಂದ 9 ರವರೆಗೆ ಪಹಣಿ ಪತ್ರಿಕೆಯಲ್ಲಿ ಕಾಲಂ ನಂ 11ರಲ್ಲಿ ಇರುವ ಹಕ್ಕುದಾರರನ್ನು ಕಾಲಂ ನಂ 9ರಲ್ಲಿ ಪೋಡಿ ಮಾಡಿ ಪ್ರತ್ಯೇಕವಾಗಿ ಪಹಣಿ ಪತ್ರಿಕೆಯನ್ನು ಮಾಡಿಕೊಡುತೆ ಮನವಿ ಮಾಡಿದರು. 13-05-1972ರ ನೆರೆ ಹಾವಳಿಯ ಸಮಯದಲ್ಲಿ ಪ್ಲಾಟುಗಳನ್ನು ನೀಡಲಾಗಿದೆ. ಆದರೆ ಹಕ್ಕುದಾರರ ಹೆಸರು ಕಾಲಂ ನಂಬರ 11ನೇ ದಾಖಲಾಗಿದೆ. ಇದರಿಂದಾಗಿ ಅವರಿಗೆ ಯಾವುದೇ ರೀತಿಯ ಸರ್ಕಾರಿ ಸೌಲಬ್ಯಗಳು ದೊರೆಯುತ್ತಿಲ್ಲ. ಹಾಗಾಗಿ ಆ ಹಕ್ಕುದಾರರ ಹೆಸರನ್ನು ಕಾಲಂ ನಂಬರ 11ರಿಂದ ಕಾಲಂ ನಂಬರ 9ಕ್ಕೆ ಸೇರಿಸುವುದ ಅತಿ ಅವಶ್ಯಕವಾಗಿದೆ. ಸದರಿ ಸರ್ವೆ ನಂಬರನಲ್ಲಿ 6040 ಹಾಗೂ 3040 ಇರುವ ಕ್ಷೇತ್ರಗಳನ್ನು ಪೋಡಿ ಮಾಡಿ ಮಾಲೀಕರ ಹೆಸರನ್ನು ಪಹಣಿ ಪತ್ರಿಕೆಯ ಕಾಲಂ ನಂಬರ 9ರಲ್ಲಿ ದಾಖಲಿಸುವಂತೆ ಮನವಿ ಮಾಡಲಾಗಿದೆ.

ಅಲ್ಲದೇ ಹೊಲನಗದ್ದೆ ಗ್ರಾಮದ ಸರ್ವೆ ನಂಬರ 592/1ನ ಅಂಚಿನಲ್ಲಿರುವ ಹೊರೆದು ಬಂದ ಜಾಗದಲ್ಲಿ ಹಿಂದೂ ರುದ್ರಭೂಮಿಯಾಗಿ ಅಲ್ಲಿರುವ ಗುಡೇಕೊಪ್ಪ, ತುಂಬಲೆಮಠ, ಹಿರೇಓಣಿ, ಒಂಟಕೇರಿ, ಭಟ್ಟರ ಮನೆಕೇರಿಗಳಲಿ ಸುಮಾರು 2500 ಜನರು ಉಪಯೋಗಿಸುತ್ತಿದ್ದಾರೆ. ಆ ಸ್ಥಳವನ್ನು ಹಿಂದೂ ರುದ್ರಭೂಮಿಯಾಗಿ ಮಂಜೂರು ಮಾಡಲು ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕು. ಬೆಟ್ಕುಳಿ ಗ್ರಾಮದ ಮುರೆಹಜನಿ ಸಮಸ್ತ ರೈತರ ಪರವಾಗಿ ವಾಸು ಗಣಪು ಗೌಡ ಇವರು ನೀಡಿದ ಪನವಿ ಪ್ರಕಾರ, ರೈತರ ಪ್ರಕರಣಗಳು ನ್ಯಾಯ ಮಂಡಳಿಯ ಮುಂದೆ ಹಾಗೆಯೇ ಇದ್ದು, ಆ ಎಲ್ಲ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಈ ಗ್ರಾಮದ ರೈತರರಿಗೆ ಸರ್ಕಾರದಿಂದ ಸಿಗುವ0ತಹ ಸವಲತ್ತುನ್ನು ದೊರೆಯಲು ಅನುವು ಮಾಡಿಕೊಡಲು ಸದರಿ ಅವರ ಪ್ರಹಣಿ ಪತ್ರಿಕೆಯಲ್ಲಿ ರೈತರ ಹೆಸರನ್ನು ದಾಖಲಿಸುವ ಸಂಬ0ಧ ಆ ಎಲ್ಲ ರೈತರ ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ಅವರ ಹೆಸರನ್ನು ಪಹಣಿಯಲ್ಲಿ ದಾಖಲಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.

300x250 AD

ಮನವಿ ಸಲ್ಲಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಪ್ರಮುಖರಾದ ರತ್ನಾಕರ ನಾಯ್ಕ, ಪ್ರದೀಪ ನಾಯಕ, ಸತೀಸ್ ನಾಯ್ಕ, ವಿ.ಎಲ್.ನಾಯ್ಕ, ಮಧುಸೂಧನ ಶೇಟ್, ಹನುಮಂತ ಪಟಗಾರ, ಸಚಿನ್ ನಾಯ್ಕ, ಕೃಷ್ಣಾನಂದ ವೆರ್ಣೇಕರ್, ಮೈಕಲ್ ಫರ್ನಾಂಡೀಸ್, ಫ್ರ್ಯಾಂಕಿ ಫರ್ನಾಂಡೀಸ್, ನಾಗರಾಜ ನಾಯ್ಕ, ವೈಭವ ನಾಯ್ಕ ಇತರರು ಇದ್ದರು.

Share This
300x250 AD
300x250 AD
300x250 AD
Back to top