Slide
Slide
Slide
previous arrow
next arrow

ಕ್ರೀಡಾಕೂಟ: ಬಂಡಲ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

300x250 AD

ಶಿರಸಿ: ಇತ್ತೀಚೆಗೆ ಇಲ್ಲಿನ ಶ್ರೀ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದ 17 ವರ್ಷ ವಯೋಮಿತಿ ಒಳಗಿನ ಹಾಗೂ 14 ವರ್ಷ ವಯೋಮಿತಿ ಒಳಗಿನ ತಾಲ್ಲೂಕಾಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಬಂಡಲ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

17 ವರ್ಷ ವಯೋಮಿತಿ ಒಳಗಿನ ವಿಭಾಗದಲ್ಲಿ ಸಂತೋಷ ಎ. ಮರಾಠಿ ಪೋಲ್ ವಾಲ್ಟ್’ನಲ್ಲಿ ಪ್ರಥಮ, ಕಾರ್ತಿಕ ಎಮ್. ಗೌಡ ಯೋಗಾಸನದಲ್ಲಿ ಪ್ರಥಮ, ವರ್ಷಿತಾ ಆರ್. ಗೌಡ ಯೋಗಾಸನದಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ, 14 ವರ್ಷ ವಯೋಮಿತಿ ಒಳಗಿನ ವಿಭಾಗದಲ್ಲಿ ಭಾಗ್ಯಲಕ್ಷ್ಮಿ ಎನ್. ಪಟಗಾರ ಗುಂಡು ಎಸೆತದಲ್ಲಿ ಪ್ರಥಮ, ಸಹನಾ ಜಿ. ನಾಯ್ಕ ಹರ್ಡಲ್ಸ್’ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಪ್ರವೇಶಿಸಿದ್ದಾರೆ.

300x250 AD

ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರು,ಊರನಾಗರಿಕರು ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಹರಿಶ್ಚಂದ್ರ ನಾಯ್ಕ ಹಾಗೂ ದೈಹಿಕ ಶಿಕ್ಷಕರಾದ ಎ.ಪಿ.ಶ್ರೀನಿವಾಸ ಹಾಗೂ ಎಲ್ಲಾ ಶಿಕ್ಷಕರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top