ಸಿದ್ದಾಪುರ: ತಾಲೂಕಿನ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ, ವೀರಾಗ್ರಣಿ ಪ್ರಶಸ್ತಿ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಿದ್ದಾಪುರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಧನ್ಯಾ ನಾಯ್ಕ ಚಕ್ರ ಎಸೆತ ಹಾಗೂ ಹ್ಯಾಮರ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾಳೆ. ರಶ್ಮಿ ನಾಯ್ಕ 3 ಸಾವಿರ ಹಾಗೂ 1500 ಮೀಟರ್ ಓಟದಲ್ಲಿ ಪ್ರಥಮ, ಕವನ ನಾಯ್ಕ 400 ಮೀಟರ್ ಹಾಗೂ 800 ಮೀಟರ್ ಓಟದಲ್ಲಿ ದ್ವಿತೀಯ, ಚೈತನ್ಯ ಗೌಡ 3 ಸಾವಿರ ಮೀಟರ್ ಓಟ ಹಾಗೂ 1500 ಮೀಟರ್ ಓಟದಲ್ಲಿ ದ್ವಿತೀಯ, ಪೋಲ್ ವಾಲ್ಟ್ ತೃತೀಯ, ನಯನ ಪೂಜಾರಿ ಜಾವೆಲಿನ್ ಎಸೆತ ಪ್ರಥಮ, ಹ್ಯಾಮರ್ ಎಸೆತದಲ್ಲಿ ದ್ವಿತೀಯ, ಹೆಣ್ಣು ಮಕ್ಕಳ ವಾಲಿಬಾಲ್ ತಂಡ ಪ್ರಥಮ ಸ್ಥಾನ ಪಡೆದಿದೆ.
14 ವರ್ಷದೊಳಗಿನ ವಿಭಾಗದಲ್ಲಿ ಅಂಕಿತ ನಾಯ್ಕ 100 ಮೀಟರ್ ದ್ವಿತೀಯ, ಎತ್ತರ ಜಿಗಿತ ಹಾಗೂ 80 ಮೀಟರ್ ಹರ್ಡಲ್ಸ್ ನಲ್ಲಿ ಪ್ರಥಮ, ಭವ್ಯ ಭಟ್ 600 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಗಂಡು ಮಕ್ಕಳ ವಿಭಾಗದಲ್ಲಿ ಕಿರಣ್ ಮಡಿವಾಳ 1500 ಮೀಟರ್ ಓಟ ದ್ವಿತೀಯ, ಸುಜನ್ ಪೂಜಾರಿ 400 ಮೀಟರ್ ಓಟ ಪ್ರಥಮ 800 ಮೀಟರ್ ಓಟ ತೃತೀಯ, ನಿತಿನ್ ಎಚ್ ಹ್ಯಾಮರ್ ಎಸೆತ ದ್ವಿತೀಯ 4×100 ಮೀಟರ್ ರಿಲೇ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್ ಪ್ರಥಮ ಥ್ರೋ ಬಾಲ್ ದ್ವಿತೀಯ, 14 ವರ್ಷದೊಳಗಿನ ವಿಭಾಗದಲ್ಲಿ 600 ಮೀಟರ್ ಓಟ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಪ್ರೌಢಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುಖ್ಯಾಧ್ಯಾಪಕಿ ಮೀನಾ ಬೋರ್ಕರ್, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ, ಮುಂದಿನ ಹಂತಗಳಿಗೆ ಶುಭ ಹಾರೈಸಿದ್ದಾರೆ.