ಶಿರಸಿ: ನಗರದಲ್ಲಿ ನಡೆಯುವ ಗಣೇಶ ಚತುರ್ಥಿಯ ಪ್ರಯುಕ್ತ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ನಗರ ಪೊಲೀಸ್ ಠಾಣೆಯ ಗಣೇಶ ಮಂಟಪದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರದಲ್ಲಿ ಪ್ರತಿಷ್ಠಾಪಿಸುವ 37 ಗಣೇಶ ಸಮಿತಿಯ ಸದಸ್ಯರು ಸಭೆಗೆ ಆಗಮಿಸಿ ಪೊಲೀಸ್ ಇಲಾಖೆಯ ಮಾಹಿತಿಯನ್ನು ಪಡೆದರು.
ಸಭೆಯಲ್ಲಿ ಮಾತನಾಡಿದ ಡಿ.ಎಸ್.ಪಿ. ಕೆ.ಎಲ್. ಗಣೇಶ ಗಣೇಶ ಸಮಿತಿಯವರು ಸಂಬಂಧಪಟ್ಟ ಇಲಾಖೆಯ ಪರವಾನಿಗೆ, ಹಾಗೂ ಧ್ವನಿವರ್ಧಕ ಪರವಾನಿಗೆ ಕಡ್ಡಾಯವಾಗಿ ಪಡೆಯಬೇಕು. ಅಗ್ನಿ ಅವಘಡ ತಪ್ಪಿಸಲು ಸರಿಯಾದ ಕ್ರಮ ಕೈಗೊಳ್ಳಬೇಕು. ರಾತ್ರಿ ವೇಳೆಯಲ್ಲಿ ಸದಸ್ಯರು ಕಾವಲು ಕಾಯಬೇಕು. ಮಹತ್ವದ್ದಾಗಿ ಸಿ.ಸಿ.ಟಿ.ವಿ. ಅಳವಡಿಸಬೇಕು ಎಂದು ಸೂಚನೆ ನೀಡಿದರು. ಗಣೇಶ ವಿಸರ್ಜನೆ ವೇಳೆಯಲ್ಲಿ ಸ್ವಯಂಸೇವಕರನ್ನು ನೇಮಿಸಿಕೊಳ್ಳಬೇಕು. ನಿಗದಿತ ಸ್ಥಳದಲ್ಲಿಯೇ ಗಣೇಶ ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ, ಗ್ರಾಮೀಣ ಠಾಣೆ ಇನಸ್ಪೇಕ್ಟರ್ ಸೀತಾರಾಮ ಪಿ., ನಗರಠಾಣೆ ಪಿ.ಎಸ್. ರಾಜಕುಮಾರ, ಮಹಂತೇಶ ಕುಂಬಾರ, ಮಾರುಕಟ್ಟೆ ಠಾಣೆ ಪಿ.ಎಸ್.ಐ. ರತ್ನಾ ಕುರಿ, ಮಾಲಿನಿ ಹಾಸಬಾವಿ ಉಪಸ್ಥಿತರಿದ್ದರು.
ಗಣೇಶ ವಿಸರ್ಜನೆ ಮಾಡುವ ಚಿಲುಮೆಕೆರೆ ಯಲ್ಲಿ ಲೈಟಿಂಗ್, ನುರಿತ ಈಜುಗಾರರ ಲೈಫ್ ಗಾರ್ಡ್ ಹಾಗೂ ಭದ್ರತೆಯನ್ನು ನಗರಸಭೆ ಹಾಗೂ ಪೊಲೀಸ್ ಇಲಾಖೆ ವತಿಯಲ್ಲಿ ಮಾಡಿಕೊಡಲಾಗುವುದು.. -ರಾಮಚಂದ್ರ ನಾಯಕ, ಸಿ.ಪಿ.ಐ. ಶಿರಸಿ