• Slide
    Slide
    Slide
    previous arrow
    next arrow
  • ಮಾರಿಕಾಂಬಾ ಪ್ರೌಢಶಾಲಾ ವಾಲಿಬಾಲ್ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ

    300x250 AD

    ಶಿರಸಿ: ಇಲ್ಲಿ‌ನ ಶ್ರೀ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ವಾಲಿಬಾಲ್ ತಂಡ ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದೆ.

    ಯಲ್ಲಾಪುರದಲ್ಲಿ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಶಿಕ್ಷಣ ಇಲಾಖೆ ಅವರು ನಡೆಸಿದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಾರಿಕಾಂಬಾ ಪ್ರೌಢಶಾಲೆ ವಿದ್ಯಾರ್ಥಿಗಳು ಫೈನಲ್ ಪಂದ್ಯದಲ್ಲಿ ಸಿದ್ದಾಪುರ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಗೈದಿದ್ದಾರೆ.

    300x250 AD

    ತಂಡದ ನಾಯಕ ಮೋಹಿತ್ ನಾಯ್ಕ್, ವೈಭವ್, ಫರಾನ್, ರಾಘವೇಂದ್ರ, ಸ್ವಿಬರ್ಡ್, ಇಶಾಂತ್, ಮಲ್ಲಿಕಾರ್ಜುನ್, ತರುಣ್, ಚಂದ್ರ ಪಾಲ್, ಸಮಯ, ಗಣೇಶ್, ಜೀವನ್ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ಉದಯ ಕೆ ಶಿರಹಟ್ಟಿ , ಪ್ರಶಾಂತ ಗಾಂವ್ಕರ್ ಮತ್ತು ಯಮುನಾ ನಾಯಕ ತರಬೇತಿ ನೀಡಿದ್ದಾರೆ‌. ವಿದ್ಯಾರ್ಥಿಗಳ ಈ ಸಾಧನೆಗೆ ಎಸ್. ಡಿ. ಎಂ. ಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರು ಹಾಗೂ ಉಪ ಪ್ರಾಚಾರ್ಯ ಯಜ್ಞೇಶ್ವರ್ ಆರ್. ನಾಯ್ಕ ಹಾಗೂ ಶಿಕ್ಷಕ, ಶಿಕ್ಷಕೇತರರು ಹರ್ಷ ವ್ಯಕ್ತಪಡಿಸಿ, ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top