• Slide
    Slide
    Slide
    previous arrow
    next arrow
  • ಭುವನೇಶ್ವರಿಯ ತಾಣದಲ್ಲಿ ಕನ್ನಡ ಪ್ರಶಸ್ತಿ ದೊರಕಿದ್ದು ಪುಣ್ಯ: ನ್ಯಾ.ತಿಮ್ಮಯ್ಯ

    300x250 AD

    ಸಿದ್ದಾಪುರ: ನಾನು ಹಸಿರು- ಕಾಡನ್ನು ಪ್ರೀತಿಸುವ ವ್ಯಕ್ತಿ. ಬರಡಾದ ಜಾಗದಲ್ಲಿ ಹೊಸ ಹಸಿರಿನ ಸೃಷ್ಟಿ ನನಗೆ ಪ್ರಿಯವಾದ ಕಾರ್ಯ. ಸಿದ್ದಾಪುರದ ಶ್ರೀಕ್ಷೇತ್ರ ಭುವನಗಿರಿಯ ಶ್ರೀ ಭುವನೇಶ್ವರಿಯ ಪವಿತ್ರ ತಾಣದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಕನ್ನಡದಲ್ಲಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ನನಗೆ ರಾಜ್ಯ ಸರ್ಕಾರದಿಂದ ಪ್ರಶಸ್ತಿ ದೊರೆಯಿತು. ಇದೀಗ ಇದೇ ಮಣ್ಣಿನಲ್ಲಿ ಸೇವೆಯಲ್ಲಿರುವಾಗಲೇ ಪದೋನ್ನತಿ ದೊರೆತಿದೆ. ಇಂತಹ ಸ್ಥಳದ ನೆನಪನ್ನು ಸದಾ ಹಸಿರಾಗಿರಿಕೊಳ್ಳುತ್ತೇನೆ ಎಂದು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ಬೆಂಗಳೂರಿನ ನ್ಯಾಯಾಲಯಕ್ಕೆ ಹಿರಿಯ ನ್ಯಾಯಾಧೀಶರಾಗಿ ತೆರಳುತ್ತಿರುವ ಜಿ.ತಿಮ್ಮಯ್ಯ ಹೇಳಿದರು.

    ಅವರು ಇಲ್ಲಿಯ ಬಾಲಭವನದಲ್ಲಿ ತಾಲೂಕಿನ ವಿವಿಧ ಸಂಘಸoಸ್ಥೆಗಳು ಸಂಘಟಿಸಿದ್ದ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಹಿರಿಯ ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಮಾತನಾಡಿ, ಮಾನವೀಯ ಮೌಲ್ಯಗಳ ಜೊತೆಯಲ್ಲಿ ವೃತ್ತಿ ಬದುಕನ್ನು ನಡೆಸುತ್ತಿರುವ ಜಿ.ತಿಮ್ಮಯ್ಯನಂತಹ ವ್ಯಕ್ತಿಗಳು ಸಮಾಜದಲ್ಲಿ ವಿರಳವಾಗಿ ಸಿಗುತ್ತಾರೆ. ಅವರ ಸಾಹಿತ್ಯಾಭಿರುಚಿ, ಸಾಂಸ್ಕೃತಿಕ ಅಭಿರುಚಿಗಳನ್ನು ಗಮನಿಸಿದಾಗ ಜ್ಞಾನ, ಧರ್ಮ, ನ್ಯಾಯ, ನೀತಿಗಳ ಸಂಗಮದ0ತೆ ಕಂಡು ಬರುತ್ತಾರೆ. ಭವಿಷ್ಯದಲ್ಲಿ ತಿಮ್ಮಯ್ಯ ಅವರಿಗೆ ಮತ್ತಷ್ಟು ಉನ್ನತವಾದ ಸ್ಥಾನಮಾನ ದೊರೆಯುವಂತಾಗಲಿ ಎಂದರು.

    ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ, ಲಯನ್ಸ ಅಧ್ಯಕ್ಷ ಆರ್.ಎಂ.ಪಾಟೀಲ, ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಶ್ರೀ ಸೇವಾ ಸಂಕಲ್ಪ ಟ್ರಸ್ಟ ಅಧ್ಯಕ್ಷ ಪಿ.ಬಿ.ಹೊಸೂರ, ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ ಗೌಡರ್, ಸ್ಪಂದನ ಸೇವಾ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಅವರುಗಳು ಜಿ.ತಿಮ್ಮಯ್ಯ ಅವರ ಸಾಮಾಜಿಕ ಕಳಕಳಿ ಕುರಿತು ಮಾತನಾಡಿ ಶುಭ ಹಾರೈಸಿದರು. ಭಾರತ ಸೇವಾದಳದ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಅಭಿನಂದನಾ ಭಾಷಣ ಮಾಡಿದರು.
    ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಮಾತನಾಡಿ ನಮ್ಮ ಜೀವನದುದ್ದಕ್ಕೂ ಹಲವು ಅಧಿಕಾರಿಗಳನ್ನು ಕಾಣುತ್ತೇವೆ. ಆದರೆ ಸಮಾಜಮುಖಿಯಾಗಿ ನಿಸ್ಪೃಹ ಸೇವೆ ಸಲ್ಲಿಸುವವರು ನಮ್ಮ ಮನದಾಳದಲ್ಲಿ ನೆಲೆ ನಿಲ್ಲುತ್ತಾರೆ. ಅಂತಹ ಮಾನವೀಯತೆ ಹೊಂದಿರುವ ನ್ಯಾಯಾಧೀಶರಾದ ಜಿ.ತಿಮ್ಮಯ್ಯ ಅವರನ್ನು ನಮ್ಮೂರಿನಿಂದ ಬೀಳ್ಕೊಡುತ್ತಿರುವುದು ದು:ಖದಾಯಕವಾದರೂ ಅವರಿಗೆ ಪದೋನ್ನತಿ ದೊರೆತಿದ್ದು ಸಂತಸವನ್ನು ನೀಡುತ್ತದೆ. ಅವರು ಭವಿಷ್ಯದಲ್ಲಿ ಮತ್ತಷ್ಟು ಉನ್ನತ ಹುದ್ದೆ ಅಲಂಕರಿಸುವoತಾಗಲಿ ಎಂದರು.

    300x250 AD

    ಜಿ.ತಿಮ್ಮಯ್ಯ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಗೀತಾ ಅವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಶಿವಮೊಗ್ಗಾ ನಗರಪಾಲಿಕೆಯ ಹಿರಿಯ ಅಧಿಕಾರಿ ತುಷಾರ ಹೊಸೂರ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರಭದ್ರ ಪಾಟೀಲ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಸಿಂಧು ಅವಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಾಗರಾಜ ಭಟ್ಟ ಸ್ವಾಗತಿಸಿದರು. ಪ್ರೊ.ರತ್ನಾಕರ ನಾಯ್ಕ ನಿರ್ವಹಿಸಿದರು. ಪ್ರಕಾಶ ಹೊಸೂರ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top