ಕುಮಟಾ: ತಾಲೂಕಿನ ಮೊರಬಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಛಾವಣಿ ದುರಸ್ತಿಗೆ ಸರ್ಕಾರದಿಂದ 5 ಲಕ್ಷ ರೂ. ಅನುದಾನ ದೊರಕಿಸಿಕೊಡುವ ಮೂಲಕ ಕಾಂಗ್ರೆಸ್ ನಿವೇದಿತ ಆಳ್ವಾ ಶೈಕ್ಷಣಿಕ ಪ್ರೇಮ ಮೆರೆದರು.
ತಾಲೂಕಿನ ಮೊರಬಾದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಚಾವಣಿ ಶಿಥಿಲಾವಸ್ಥೆಯಲ್ಲಿತ್ತು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು. ಈ ಬಗ್ಗೆ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕ ನಿವೇದಿತ ಆಳ್ವಾ ಅವರ ಗಮಕ್ಕೆ ತಂದಿದ್ದರು.
ತಕ್ಷಣ ಸ್ಪಂದಿಸಿದ ಆಳ್ವಾ ಅವರು, ಶಾಲೆಯ ಮೇಲ್ಛಾವಣಿ ದುರಸ್ತಿಗೆ ಬೇಕಾದ 5 ಲಕ್ಷ ಅನುದಾನವನ್ನು ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್ ಅವರಿಂದ ಮಂಜೂರಿ ಮಾಡಿಸುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆದಿದ್ದಾರೆ. ಆಳ್ವಾ ಅವರ ಶೈಕ್ಷಣಿಕ ಪ್ರೇಮಕ್ಕೆ ಶಾಲಾ ಆಡಳಿತ ಮಂಡಳಿ ಧನ್ಯವಾದ ಸಲ್ಲಿಸಿದೆ.