Slide
Slide
Slide
previous arrow
next arrow

ವಿಜ್ಞಾನ ನಾಟಕ ಸ್ಪರ್ಧೆ: ಲಯನ್ಸ್ ವಿದ್ಯಾರ್ಥಿಗಳಿಗೆ ತೃತೀಯ ಸ್ಥಾನ

300x250 AD

ಶಿರಸಿ: ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಸೆ.7,ಗುರುವಾರದಂದು ನಡೆದ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಶಿರಸಿ ಲಯನ್ಸ್ ಶಾಲಾ ತಂಡ ಭಾಗವಹಿಸಿ ತೃತೀಯ ಸ್ಥಾನ ಗಳಿಸಿದೆ.
 

ವಿದ್ಯಾರ್ಥಿನಿಯರಾದ ಪ್ರತೀಕ್ಷಾ ಹೆಗಡೆ ,ಶ್ರಾವಣಿ ಮಹಾಲೆ, ಸಹನಾ ಭಟ್, ಭುವನಾ ಹೆಗಡೆ ಸಿಂಚನಾ ಶೆಟ್ಟಿ, ಸೋನಂ ಶೆಟ್ಟಿ, ಶ್ರಾವ್ಯ ಶೇಟ್ ಇವರು  ನಾಟಕದಲ್ಲಿ ಭಾಗವಹಿಸಿದ್ದು,ನಾಟಕವನ್ನು ಅತ್ಯುತ್ತಮವಾಗಿ  ನಿವೃತ್ತ ಪ್ರೊ.ಹೆಚ್.ಆರ್. ಅಮರನಾಥ್ ನಾಟಕದ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ಶಾಲೆಯ ವಿಜ್ಞಾನ ಶಿಕ್ಷಕಿ ಪವಿತ್ರಾ ನಾಯಕ್ ಸಹ ನಿರ್ದೇಶನ ಮಾಡಿದ್ದು,  ಸಚಿನ್ ಕೊಡಿಯಾ ಸಹಕಾರ ನೀಡಿರುತ್ತಾರೆ. ಅಭಿನಯಿಸಿದ ವಿದ್ಯಾರ್ಥಿಗಳಿಗೆ, ಬೆಂಬಲಿಸಿದ ಪೋಷಕರಿಗೆ, ನಿರ್ದೇಶಕರಿಗೆ ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿ ಯ ಪದಾಧಿಕಾರಿಗಳು ಲಯನ್ಸ್ ಶಿಕ್ಷಣ ಸಮೂಹ ಸಂಸ್ಥೆಯ ಪ್ರಾಂಶುಪಾಲ ಶಶಾಂಕ್ ಹೆಗಡೆ ಶಾಲೆಯ ಸಹ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top