• Slide
    Slide
    Slide
    previous arrow
    next arrow
  • ಬಾಲಮಂದಿರ ಪ್ರೌಢಶಾಲೆಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಠಮಿ

    300x250 AD

    ಕಾರವಾರ: ಬಾಲಮಂದಿರ ಪ್ರೌಢಶಾಲೆಯಲ್ಲಿ ಬಹೂರೂಪಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಶೃದ್ಧಾ-ಭಕ್ತಯಿಂದ ಆಚರಿಸಲಾಯಿತು.
    ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಾಲಮಂದಿರ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅಂಜಲಿ ಮಾನೆ ಮಾತನಾಡಿ, ಭಗವಾನ್ ಶ್ರೀಕೃಷ್ಣನ ದಿವ್ಯ ಸಂದೇಶಗಳು, ಲೀಲೆಗಳು ಮತ್ತು ಆದರ್ಶಗಳು ನಮಗೆ ಪ್ರೇರಣೆಯಾಗಿದೆ. ಪುಟಾಣಿ ಮಕ್ಕಳಲ್ಲಿ ಶ್ರೀಕೃಷ್ಣನ ಆದರ್ಶಗಳನ್ನು ಜಾಗೃತಗೊಳಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

    ಬಾಲಮಂದಿರ ಬಾಲವಾಡಿ, ಎಲ್‌ಕೆಜಿ, ಎಚ್‌ಕೆಜಿ ಮತ್ತು ತರಗತಿ-1ರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ‘ಬಹುರೂಪಿ ಶ್ರೀಕೃಷ್ಣ ಛದ್ಮವೇಶ ಸ್ಪರ್ಧೆ’ಯಲ್ಲಿ ಪುಟಾಣಿ ಮಕ್ಕಳು ವಿವಿಧ ಕೃಷ್ಣವೇಷ ಧರಿಸಿ ಎಲ್ಲರನ್ನೂಆಧ್ಯಾತ್ಮ ಲೋಕಕ್ಕೆ ಕೊಂಡೊಯ್ದರು.ಅತ್ಯುತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಿ ಪುರಸ್ಕರಿಸಲಾಯಿತು.
    ನಂತರ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯರಾಣಿ ನೃತ್ಯ ಶಾಲೆಯ ತರಬೇತುದಾರರಾದ ನಾಗವೇಣಿ ಹೆಗಡೆ ಮತ್ತು ರಿದಂ ಹಾರ್ಟ್ಬೀಟ್ ಡಾನ್ಸ್ & ಆರ್ಟ್ ಶಾಲೆಯ ತರಬೇತುದಾರರಾದ ವಿಜಯೇಂದ್ರಕುಮಾರೇಶ ಹಾಗೂ ಪೂನಂ ಕುಮಾರೇಶರವರು ನಡೆಸಿಕೊಟ್ಟ ಶ್ರೀಕೃಷ್ಣನ ಲೀಲೆಯ ಮಕ್ಕಳ ನೃತ್ಯರೂಪಕಗಳು ಮತ್ತು ದಿನಕರ ಕಲಾನಿಕೇತನ ಸಂಗೀತ ವಿದ್ಯಾಲಯದ ಗಣಪತಿ ಹೆಗಡೆ ಹಾಗೂ ಮಾರುತಿ ನಾಯ್ಕರವರು ನಡೆಸಿಕೊಟ್ಟ ಮಕ್ಕಳ ಭಜನಾ ಕಾರ್ಯಕ್ರಮಗಳು ಸಭಿಕರನ್ನು ಆಧ್ಯಾತ್ಮ ಲೋಕಕ್ಕೆ ಕರೆದೊಯ್ದರು.
    ಭಾಗ್ಯವತಿ ಭಟ್ ಕುರ್ಸೆ ಸ್ವಾಗತಿಸಿದರ. ಸವಿತಾ ಗುನಗಿ ನಿರ್ಣಾಯಕರ ಪರಿಚಯ ಮಾಡಿದರು. ವಾಯಲೆಟ್ ಗುಡಿನೋ ಕೃಷ್ಣಾಷ್ಠಮಿ ಕುರಿತು ಮಾತನಾಡಿದರು. ಫಿಲ್ಪನಾ ಮಾಂಡಲೀಕ ವಂದನಾರ್ಪಣೆ ಸಲ್ಲಸಿದರು. ನಿರ್ಣಾಯಕರಾಗಿ ಸುಮತಿ ದಾಮ್ಲೆ ಪ್ರೌಢಶಾಲೆಯ ಶಿಕ್ಷಕ ಸಂತೋಷ ಎಂ.ಶೇಟ್ ಹಾಗೂ ಹಿಂದೂ ಪ್ರೌಢಶಾಲೆಯ ಶಿಕ್ಷಕಿ ಭವಾಣಿ ಹೆಗಡೆ ನಿರ್ಣಾಯಕರಾಗಿ ಆಗಮಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಶ್ರೀಕೃಷ್ಣ ಛದ್ಮವೇಶ ಸ್ಪರ್ಧೆಯ ವಿಜೇತರು: ಬಾಲವಾಡಿ ವಿಭಾಗ: ಅದ್ವೈತ ಎ.ಪ್ರಯಾಗ (ಪ್ರಥಮ), ಅವನೀಶ ಮಡಗಾಂವಕರ (ದ್ವಿತೀಯ), ಪ್ರಕೃತಿ ವಡ್ಡರ (ತೃತೀಯ), ಕು.ಅಧ್ವೈತ ಆರ್. ನಾಯ್ಕ ಮತ್ತು ಕು.ಶಿವಾನಿ ಕಲ್ಯಾಣಕರ (ಸಮಾಧಾನಕರ).
    ಎಲ್.ಕೆ.ಜಿ. ವಿಭಾಗ: ಅಯುಷಿ ಎಸ್.ಓಣಿಕೇರಿ ಮತ್ತು ನಿನಾದ ಪಿ.ನಾಯ್ಕ (ಪ್ರಥಮ), ಕು.ಸೋಹನ ಮಂಡಳ ಮತ್ತು ಕು.ನಿತೀಲ್‌ಎಮ್.ನಾಯಕ (ದ್ವಿತೀಯ), ಕು.ರೀವಾ ಜಿ. ರಾಣೆ (ತೃತೀಯ), ಮೈಥಿಲಿ ಕೆ.ಕಿಂದಳಕರ ಮತ್ತು ಕು.ವಿಶ್ವಯಆರ್.ದೇವಾಡಿಗ (ಸಮಾಧಾನಕರ).
    ಎಚ್.ಕೆ.ಜಿ. ವಿಭಾಗ: ಕು. ಅಥರ್ವ ಪ್ರಶಾಂತ (ಪ್ರಥಮ), ಆದ್ಯಾ ಎಸ್.ಬೈಕೇರಿಕರ (ದ್ವಿತೀಯ), ಆರಾಧ್ಯ ಎಸ್.ಗಜೀನಕರ (ತೃತೀಯ), ಭಾರ್ಗವ ಜಿ.ನಾಯಕ (ಸಮಾಧಾನಕರ), ಆದ್ಯಾ ಎ.ರಾಮಾಪುರ (ಸಮಾಧಾನಕರ).
    ತರಗತಿ-1: ರುದ್ರಾ ಮಹಾಂಟಿ (ಪ್ರಥಮ), ಶ್ರೇಷ್ಠಾ ಎಸ್.ಹಳದನಕರ (ದ್ವಿತೀಯ), ಅದ್ವಿಕಾ ವಿ.ಹೆಗಡೆ (ತೃತೀಯ), ಪ್ರಣಮ್ಯಾ ವಿ.ಗಾಡಿಕಾ ಮತ್ತು ಸಾನ್ವಿ ವಿ.ಪಟಗಾರ (ಸಮಾಧಾನಕರ). ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಜೀರುದ್ಧೀನ್ ಸೈಯದ್, ಉದಯ ಆಚಾರಿ, ಕಾಂಚನಾ ನಾಯ್ಕ, ಶೋಭಾ ನಾರ್ವೆಕರ ಮೊದಲಾದ ಶಿಕ್ಷಕರು ಮತ್ತು ಸಿಬ್ಬಂದಿಗಳು ಸಹಕರಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top