• Slide
    Slide
    Slide
    previous arrow
    next arrow
  • ವಿಹಿಂಪ ಮಾತೃಮಂಡಳಿಯಿಂದ ಸಾಮೂಹಿಕ ಅರಿಷಿಣ-ಕುಂಕುಮ ಕಾರ್ಯಕ್ರಮ

    300x250 AD

    ಯಲ್ಲಾಪುರ: ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃಮಂಡಳಿ ವತಿಯಂದ ಸಾಮೂಹಿಕ ಅರಿಷಿಣ ಕುಂಕುಮ ಕಾರ್ಯಕ್ರಮವು ಸಂಭ್ರಮದಿಂದ ನೆರವೇರಿತು.

    ಕಾರ್ಯಕ್ರಮವನ್ನು ಸಾಹಿತಿ ಶಿವಲೀಲಾ ಹುಣಸಗಿ ಉದ್ಘಾಟಿಸಿ ಮಾತನಾಡಿ, ಮಹಿಳೆ ಎಷ್ಟೇ ಸ್ವಾವಲಂಬಿಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ಹೆಸರನ್ನು ಗಳಿಸುತ್ತಿದ್ದರೂ, ಆಕೆ ಒಂದು ಮನೆ ಬೆಳಗುವ ಮಹಾಲಕ್ಷ್ಮಿಯಾಗಿದ್ದಾಳೆ. ಅರಿಷಿಣ ಕುಂಕುಮ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಮೌಲ್ಯಗಳನ್ನು ಹೆಚ್ಚಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

    300x250 AD

    ವಿ. ಅನಂತ ಭಟ್ ನೇತೃತ್ವದಲ್ಲಿ ಮಹಿಳೆಯಿಂದ ಕುಂಕುಮಾರ್ಚನೆ, ಲಲಿತಾ ಅಷ್ಟೋತ್ತರ ಪಠಣ ನಡೆಯಿತು. ಈ ವೇಳೆ ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು, ಹಲವು ಗಣ್ಯರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top