ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಸಂತೊಳ್ಳಿ ಗ್ರಾಮದಲ್ಲಿ ಸೆ.8 ಶುಕ್ರವಾರದಂದು ಆರೋಗ್ಯ ಇಲಾಖೆಯಿಂದ ಬಿ.ಪಿ ಮತ್ತು ಶುಗರ್ ತಪಾಸಣೆ ಶಿಬಿರವನ್ನು ನಡೆಸಲಾಯಿತು.
ಶಿಬಿರದ ಉದ್ಘಾಟಣೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ನಟರಾಜ್ ಬಿ ಹೊಸೂರು ಉದ್ಘಾಟಿಸಿದರೆ, ಅಧ್ಯಕ್ಷತೆಯನ್ನು ಕಾಳಂಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಾಜಶೇಖರ ಬಿ. ಗೌಡ ವಹಿಸಿದ್ದರು. ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಅಕ್ಕಮ್ಮಾ ಆಲೂರ, ಗ್ರಾಮ ಪಂಚಾಯತ ಸದಸ್ಯರಾದ ಭದ್ರು ಬಿ ಗೌಡ್ರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾಕ್ಟರ್ ಶ್ರೇಯಸ್ ತಾಂಡೇ ಇವರೆಲ್ಲರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳಾದ ಚೈತ್ರಾ ದಾರವಾಡ, ತನುಜಾ ಜೋಗಳೆಕರ, ಅಂಗನವಾಡಿ ಕಾರ್ಯಕರ್ತೆಯಾದ ಸವಿತಾ ಬಿಜಾಪುರ, ಆಶಾ ಕಾರ್ಯಕರ್ತೆಯಾದ ಗೀತಾ ತಂಬೊಳಿ, ಗ್ರಾಮಸ್ಥರಾದ ಬಂಗಾರಪ್ಪ ಲೆಕ್ಕದ, ರವಿ ಭೋವಿ, ಚಂದ್ರು ಚನ್ನಯ್ಯ, ಶಿವಪ್ಪ ಭೋವಿ, ಪರಸಪ್ಪ, ಕುಮಾರ ಭೋವಿ, ವೀರಭದ್ರಪ್ಪ ಲೆಕ್ಕದ, ಶಿವಾಜಿ ಬಸಪ್ಪ ಗೌಡ, ಸ್ನೇಹಾ ಆಚಾರಿ, ಚನ್ನಪ್ಪ ಗೌಡ ಇನ್ನು ಅನೇಕ ಗ್ರಾಮಸ್ಥರು ಹಾಜರಿದ್ದರು. ಯುವರಾಜ ಜೆ ಗೌಡ ಸ್ವಾಗತಿಸಿ,ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರದಲ್ಲಿ 70 ಜನ ಭಾಗವಹಿಸಿದ್ದರು.