Slide
Slide
Slide
previous arrow
next arrow

ಸದೃಢ ಆರೋಗ್ಯ ನಿರ್ಮಾಣಕ್ಕೆ ಕ್ರೀಡೆ ಸಹಕಾರಿ: ಶೈಲೇಶ್ ಪರಮಾನಂದ

300x250 AD

ದಾಂಡೇಲಿ: ಮಾನವನ ಸದೃಢ ಆರೋಗ್ಯ ವರ್ಧನೆಗೆ ಕ್ರೀಡೆ ದಿವ್ಯ ಔಷಧವಾಗಿದೆ. ಆರೋಗ್ಯ ವರ್ಧನೆಯ ಜೊತೆ ಜೊತೆಗೆ ವ್ಯಕ್ತಿತ್ವ ವಿಕಸನದಲ್ಲೂ ಕ್ರೀಡೆ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ. ಇಂದು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತದೆ. ದಸರಾ ಕ್ರೀಡಾಕೂಟವು ಪರಸ್ಪರ ಸೌಹಾರ್ದತೆಯನ್ನು ಮೆರೆಯುವ ಕ್ರೀಡಾಕೂಟವಾಗಿದೆ ಎಂದು ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ನುಡಿದರು.
ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಜಿಲ್ಲೆಯ ಹೆಮ್ಮೆಯಾಗಿರುವ ಕುಸ್ತಿ ಪಟು ಮಮತಾ ಕೇಳೋಜಿಯವರ ಸಂಯೋಜನಯೆ ಮೂಲಕ ಆಯೋಜನೆಗೊಂಡ ಈ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲೆಂದು ಶುಭವನ್ನು ಹಾರೈಸಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಹಾಲಮನ್ನವರ್, ತಾಲ್ಲೂಕಿನ ಗ್ರಾಮೀಣ ಭಾಗದ ಕ್ರೀಡಾಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಕ್ರೀಡಾಕೂಟ ಕ್ರೀಡಾ ಪ್ರತಿಭೆಗಳ ಉಜ್ವಲ ಭವಿಷ್ಯಕ್ಕೆ ಸ್ಪೂರ್ತಿಯಾಗಲೆಂದು ಶುಭವನ್ನು ಹಾರೈಸಿದರು.
ದಸರಾ ಕ್ರೀಡಾಕೂಟದ ಸಂಯೋಜಕಿ ಮಮತಾ ಕೇಳೋಜಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಡೇವಿಡ್ ದಾನಂ ಸ್ವಾಗತಿಸಿದರು. ಸೀತಾರಾಮ ನಾಯ್ಕ ಅವರು ಪ್ರತಿಜ್ಞಾ ವಿಧಿ ಬೋಧಿಸಿ, ಕರ‍್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ವೇದಿಕೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶ್ ನಾಯಕ, ಅಂಬಿಕಾನಗರ ಗ್ರಾ.ಪಂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ರಾಥೋಡ್, ಕೋಗಿಲಬನ/ ಬಡಕಾನಶಿರಡಾ ಗ್ರಾ.ಪಂ ಪಂಚಾಯ್ತು ಅಭಿವೃದ್ಧಿ ಅಧಿಕಾರಿ ಸುರೇಶ್ ಮಡಿವಾಳ, ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಎಚ್.ಎಸ್.ಉದ್ದಂಡಿ, ಪುಂಡಲೀಕ್ ಬಂದೂರಕರ್, ಮಮತಾ ಕಾಮತ್, ವೀಣಾ ಪ್ರಕಾಶ್ ಮೇಹ್ತಾ, ಡಿ.ಎಸ್.ಮುಲ್ತಾನಿ, ಪ್ರವೀಣ್, ಸಾಧಿಕ್ ಬೀಡಿ, ಸಮದ್ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top