Slide
Slide
Slide
previous arrow
next arrow

ಸೆ.12ಕ್ಕೆ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಓಟ

300x250 AD

ಕಾರವಾರ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕಗಳ ಸಹಯೋಗದಲ್ಲಿ ಯುವಜನೋತ್ಸವ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಸೆ.12ರಂದು ಬೆಳಗ್ಗೆ 6.45ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ 5 ಕಿ.ಮೀ. ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದೆ.

ಎಚ್.ಐ.ವಿ/ ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಹೆಚ್.ಐ.ವಿ ಮತ್ತು ಏಡ್ಸ್ (ತಡೆ) ಕಾಯ್ದೆ 2017, ನ್ಯಾಕೋ ಏಡ್ಸ್ ಆಪ್, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್.ಟಿ.ಐ ಇತ್ಯಾದಿ ಬಗ್ಗೆ ಅರಿವು ಮೂಡಿಸುವುದು ಈ ಮ್ಯಾರಥಾನ್‌ನ ಉದ್ದೇಶವಾಗಿದೆ.
ಜಿಲ್ಲೆಯ 17ರಿಂದ 25 ವರ್ಷದ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ 5 ಕಿ.ಮೀ ಮ್ಯಾರಥಾನ್ ಓಟದಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸುವ ಬೇರೆ ತಾಲೂಕಿನ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾತ್ರ ಮಾಡಲಾಗುವುದು.
ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನ 5,000 ದ್ವಿತೀಯ ಬಹುಮಾನ 3500, ತೃತೀಯ ಬಹುಮಾನ 2500, ಹಾಗೂ ಸಮಾಧಾನಕರ ಬಹುಮಾನ 4 ಹುಡುಗರಿಗೆ ತಲಾ 1000 ಹಾಗೂ ಪ್ರಮಾಣಪತ್ರ ನೀಡಲಾಗುವುದು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಬಹುಮಾನ 5,000 ದ್ವಿತೀಯ ಬಹುಮಾನ 3500, ತೃತೀಯ ಬಹುಮಾನ 2500, ಸಮಾಧಾನಕರ ಬಹುಮಾನ 3 ಹುಡುಗಿಯರಿಗೆ ತಲಾ 1000 ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಎಸ್.ಬಿ.ಹಿರೇಮಠ (ಮೊ.ಸಂ.:tel:+919482187779), ವಿನೋದ ಹೊನ್ನಾವರ (ಮೊ.ಸಂ.:tel:+916362579485) ಅವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top