• Slide
    Slide
    Slide
    previous arrow
    next arrow
  • ಉದಯನಿಧಿ ಸ್ಟಾಲಿನ್ ವಿರುದ್ಧ ಹೊನ್ನಾವರ ಠಾಣೆಯಲ್ಲಿ ದೂರು

    300x250 AD

    ಹೊನ್ನಾವರ: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ ತಮಿಳುನಾಡು ಯುವಜನ ಕ್ಷೇಮ ಮತ್ತು ಕ್ರೀಡಾಭಿವೃದ್ದಿ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಪೊಲೀಸ್ ಠಾಣೆಗೆ ವಿವಿಧ ಸಮಾಜದ ಮುಖಂಡರು ಗುರುವಾರ ದೂರು ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅದಕ್ಕೆ ಬೆಂಬಲವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಮತ್ತು ಮಹದೇವಪ್ಪನವರ ಹೇಳಿಕೆಗಳು, ಸಮರ್ಥನೆ ವ್ಯವಸ್ಥಿತ, ಉದ್ದೇಶಿತ, ಆಳವಾದ, ಕಳವಳಕಾರಿ ಮತ್ತು ಅಪಾಯಕಾರಿಯಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

    ತಮಿಳುನಾಡಿನ ಮುಖ್ಯಮಂತಿಗಳು ತಮ್ಮ ಒಕ್ಕೂಟ ಐ.ಎನ್.ಡಿ.ಐ.ಎ. ಗೆಲ್ಲದ್ದಿದರೆ ಈ ದೇಶ ಮಣಿಪುರದ ಹಾದಿ ಹಿಡಿಯುವ ಬಗ್ಗೆ ಹೇಳಿಕೆ ಕಾಕತಾಳೀಯವಲ್ಲ. ಬದಲಾಗಿ ಭಯಾನಕ ಮುನ್ನುಡಿಯಾಗಿದೆ ಎಂದಿದ್ದಾರೆ. ಇತ್ತೀಚೆಗೆ ಕೆಲವು ದುಷ್ಟಶಕ್ತಿಗಳು ಹಲವು ಮುಖವಾಡಗಳನ್ನು ಧರಿಸಿ ನಗರದ ನಕ್ಸಲರಂತೆ ಹೇಗಾದರೂ ಮಾಡಿ ಭಾರತೀಯತೆಯ ಬುನಾದಿಯಾಗಿರುವ ಹಿಂದು ಧರ್ಮ ಹಾಗೂ ಹಿಂದೂ ಧರ್ಮದ ಆಧಾರಸ್ತಂಭ, ಬೆನ್ನೆಲುಬು ಹಾಗೂ ಶ್ವಾಸವಾಗಿರುವ ಸನಾತನ ಧರ್ಮದ ಬಗ್ಗೆ ಸಂಚು, ಪಿತೂರಿ ಹಾಗೂ ಷಡ್ಯಂತ್ರಗಳು ನಡೆಯುತ್ತಾ ಬಂದಿರುವುದು ಆತಂಕಕಾರಿ, ಅಪಾಯಕಾರಿ, ಕಳವಳಕಾರಿ ಎಂದು ದೂರಿನಲ್ಲಿ ಹೇಳಿದ್ದಾರೆ. ಉದಯನಿಧಿ ಸ್ಟಾಲಿನ್, ಪ್ರಗತಿಪರ ಬರಹಗಾರರ ಒಕ್ಕೂಟ ಸದಸ್ಯರು ಮತ್ತು ರಾಷ್ಟ್ರಮಟ್ಟ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇರುವ ಸದಸ್ಯರನ್ನು ಕೂಡಲೇ ಬಂಧಿಸಿ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ಕೋರಿದ್ದಾರೆ. ಕಲಂ 153ಬಿ(ಸಿ), 153ಎ, 295ಎ,505-120ಬಿ ಇತರೆ ಕಾನೂನಿನ ಅಡಿಯಲ್ಲಿ ವಿದ್ವಂಸಕ ಸಂಬಂಧಪಟ್ಟಂತೆ ಕ್ರಮ ಹಾಗೂ ಎನ್.ಐ.ಎ. ತನಿಖೆಗೆ ವಹಿಸಬೇಕೆಂದು ಮನವಿ ಮಾಡಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಎಚ್.ಆರ್.ಗಣೇಶ, ಹಳದೀಪುರ ಪಂಚಾಯಿತಿ ಉಪಾಧ್ಯಕ್ಷ ಅಜಿತ ನಾಯ್ಕ. ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ವಿ.ಎನ್.ಭಟ್ ಅಳ್ಳಂಕಿ, ಶ್ರೀಧರ ನಾಯ್ಕ ಜಲವಳ್ಳಿ, ವಕೀಲ ಎಂ.ಎಸ್. ಭಟ್ ಮತ್ತಿತರರು ದೂರು ನೀಡಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top