Slide
Slide
Slide
previous arrow
next arrow

ಭಾರತಕ್ಕೆ ಮರಳಿ ಸೇರಲಿರುವ ಶಿವಾಜಿ ಮಹಾರಾಜರ ‘ವ್ಯಾಘ್ರ ನಖ’

300x250 AD

ನವದೆಹಲಿ: 1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿಯಾದ ಅಫ್ಜಲ್ ಖಾನ್‌ನನ್ನು ಹತ್ಯೆ ಮಾಡಲು ಛತ್ರಪತಿ ಶಿವಾಜಿ ಮಹಾರಾಜರು ಪ್ರಯೋಗಿಸಿದ ಹುಲಿ ಉಗುರುಗಳ ಮಾದರಿಯ ವ್ಯಾಘ್ರ ನಖವನ್ನು ಹಿಂದಿರುಗಿಸಲು ಯುಕೆ ಒಪ್ಪಿಕೊಂಡಿದೆ.

ಈ ಐತಿಹಾಸಿಕ ವ್ಯಾಘ್ರ ನಖವನ್ನು ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ. ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಅವರು ಈ ತಿಂಗಳ ಕೊನೆಯಲ್ಲಿ ಲಂಡನ್‌ಗೆ ಭೇಟಿ ನೀಡಲಿದ್ದು, ತಿಳುವಳಿಕಾ ಒಪ್ಪಂದದ (ಎಂಒಯು) ಮೂಲಕ ಮರಳುವಿಕೆಯನ್ನು ಔಪಚಾರಿಕಗೊಳಿಸಲಿದ್ದಾರೆ. ನಿರೀಕ್ಷೆಯಂತೆ ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಐತಿಹಾಸಿಕ ಮಹತ್ವದ ‘ವ್ಯಾಘ್ರ  ನಖ’ ಈ ವರ್ಷ ಭಾರತಕ್ಕೆ ಮರಳಬಹುದು ಎಂದು ಸಚಿವ ಮುಂಗಂಟಿವಾರ್ ಘೋಷಿಸಿದ್ದಾರೆ.

300x250 AD

“ಯುಕೆ ಅಧಿಕಾರಿಗಳು ಛತ್ರಪತಿ ಶಿವಾಜಿ ಮಹಾರಾಜರ ‘ವ್ಯಾಘ್ರ  ನಖ’ವನ್ನು ಹಿಂದಿರುಗಿಸಲು ನಾವು ಸಿದ್ಧರಿದ್ದೇವೆ ಎಂದು ನಾವು ದೃಢೀಕರಿಸಿದ್ದಾರೆ. ಹಿಂದೂ ಕ್ಯಾಲೆಂಡರ್‌ನ ಆಧಾರದ ಮೇಲೆ ಶಿವಾಜಿ ಅಫ್ಜಲ್‌ಖಾನ್‌ನನ್ನು ಕೊಂದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅದನ್ನು ಮರಳಿ ತರಲು ನಾವು ಪರಿಗಣಿಸುತ್ತಿದ್ದೇವೆ. ನಾವು ಪರ್ಯಾಯ ದಿನಾಂಕಗಳನ್ನು ಕೂಡ ಅನ್ವೇಷಿಸುತ್ತಿದ್ದೇವೆ ಮತ್ತು ‘ವಾಘ್ರ ನಖ’ವನ್ನು ಸಾಗಿಸಲು ವ್ಯವಸ್ಥೆ ಮಾಡುತ್ತಿದ್ದೇವೆ” ಎಂದಿದ್ದಾರೆ.

Share This
300x250 AD
300x250 AD
300x250 AD
Back to top