• Slide
    Slide
    Slide
    previous arrow
    next arrow
  • ಅಧಿವಕ್ತಾ ಪರಿಷತ್‌ನ 30 ನೇ ವರ್ಷದ ಸಂಸ್ಥಾಪನಾ ದಿನ ಆಚರಣೆ

    300x250 AD

    ಶಿರಸಿ: ಅಧಿವಕ್ತಾ ಪರಿಷತ್‌ನ ೩೦ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಜಿಲ್ಲಾ ಘಟಕದಿಂದ ಇಲ್ಲಿನ ಹಿರಿಯ ವಕೀಲರಿಗೆ ಗೌರವ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.

    ತಾಲೂಕಿನ ಹಿರಿಯ ನ್ಯಾಯವಾದಿಗಳಾದ ಪಿ.ಜಿ.ಹೆಗಡೆ ಜಾನ್ಮನೆ ದಂಪತಿಗಳ ಮನೆಗೆ ತೆರಳಿ, ಸನ್ಮಾನಿಸಿ, ಸಿಹಿ ವಿತರಣೆ ಮಾಡಲಾಯಿತು. 1960 ರಲ್ಲಿ ತಮ್ಮ ವಕೀಲ ವೃತ್ತಿಯನ್ನು ಪ್ರಾರಂಭಿಸಿ, ಇಂದಿಗೂ ಸಹ ಅವರ ಜನಪ್ರಿಯತೆ ಮಾಸಿಲ್ಲ. ಇಂದು ತಮ್ಮ 91 ನೇ ವಯಸ್ಸಿನಲ್ಲೂ ಇತರರಿಗೆ ಮಾರ್ಗದರ್ಶನ ಮಾಡಿ, ತಾವು ಮಾಡುತ್ತಿರುವ ಕಾರ್ಯವು ಸಮಾಜ ಮತ್ತು ದೇಶ ಕಟ್ಟವು ನಿಟ್ಟಿನಲ್ಲಿ ಸಾಗಲಿ ಎಂದು ಆಶೀರ್ವದಿಸಿದರು.

    300x250 AD

    ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ವಿ ಎಂ ಹೆಗಡೆ, ಸರಸ್ವತಿ ಹೆಗಡೆ, ಅಧಿವಕ್ತಾ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಸಂತೋಷ ಜಿ ಹೆಗಡೆ, ಕಾರ್ಯದರ್ಶಿ ಸತೀಶ್ ಜಿ ನಾಯ್ಕ್, ಆರ್ ವಿ ಹೆಗಡೆ, ಮಂಜುನಾಥ್ ಗೌಡ, ಎನ್ ಆರ್ ನಾಯ್ಕ ಮತ್ತು ಪ್ರಶಾಂತ್ ನಾಯ್ಕ್ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top