• Slide
  Slide
  Slide
  previous arrow
  next arrow
 • ಕೆ.ಡಿ.ಸಿ.ಸಿ ಬ್ಯಾಂಕ್’ಗೆ ಉತ್ತಮ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಪ್ರಶಸ್ತಿ ಪ್ರದಾನ

  300x250 AD

  ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ನೀಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯು ಉತ್ತರ ಕನ್ನಡ ಜಿಲ್ಲಾ ಕೆನರಾ ಡಿಸ್ಟ್ರಿಕ್ಟ್ ಕೋ ಆಪರೇಟಿವ್ ಬ್ಯಾಂಕ್ ಗೆ ( ಕೆಡಿಸಿಸಿ ) ಗೆ ಲಭಿಸಿದೆ.

  ಬ್ಯಾಂಕ್’ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಹಾಗೂ ಉಪಾಧ್ಯಕ್ಷರಾದ ಮೋಹನದಾಸ್ ನಾಯಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಜಿ.ಭಾಗ್ವತ್ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಬೆಳ್ಳಿ ಪ್ರಕಾಶ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

  300x250 AD

  ಈ ವೇಳೆ ಮಾತನಾಡಿದ ಶಾಸಕರಾದ ಶಿವರಾಮ ಹೆಬ್ಬಾರ್ ಉತ್ತರ ಕನ್ನಡ ಜಿಲ್ಲೆಯ ರೈತ ಹಾಗೂ ಜನಸಾಮಾನ್ಯರ ಜೀವನಾಡಿಯಾಗಿ ಕೆಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತದೆ. ಈ ಪ್ರಶಸ್ತಿ ಲಭಿಸುವುದಕ್ಕೆ ಕಾರಣೀಕರ್ತರಾದ ಜಿಲ್ಲೆಯ ರೈತರಿಗೆ, ಗ್ರಾಹಕರಿಗೆ, ಬ್ಯಾಂಕ್ ಸಿಬ್ಬಂದಿ ವರ್ಗದರಿಗೆ ಹಾಗೂ ಸಹಕಾರಿ ಸಂಘಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top