Slide
Slide
Slide
previous arrow
next arrow

ಸೆ.7ಕ್ಕೆ ಕಾರವಾರ, ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ

300x250 AD


ಕಾರವಾರ: 220ಕೆ.ವಿ ವಿದ್ಯುತ್ ಸ್ವೀಕರಣ ಕೇಂದ್ರ ಶೇಜವಾಡದಲ್ಲಿ ಅತಿ ಅವಶ್ಯಕ ಜಿಓಎಸ್ ನಿರ್ವಹಣಾ ಹಾಗೂ ತ್ರೈಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ಸೆ.7ರಂದು ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ ಕಾರವಾರ ಹಾಗೂ ಅಂಕೋಲಾ ತಾಲೂಕಿನಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕುಮಟಾದಲ್ಲಿ: ಇಲ್ಲಿನ ಉಪ ವಿಭಾಗದ 110/33/11 ಕೆ.ವಿ ಕೆ.ಪಿ.ಟಿ.ಸಿ.ಎಲ್ ಗ್ರಿಡ್‌ನಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವ ಕಾರಣ ಗ್ರಾಮೀಣ ಪ್ರದೇಶದ ಎಲ್ಲಾ ಭಾಗಗಳಲ್ಲ್ಲಿ ಸೆ.7 ಬೆಳಗ್ಗೆ 9ರಿಂದ ಮದ್ಯಾಹ್ನ 3 ಗಂಟೆಯವರೆಗೆ ಹಾಗೂ ಕುಮಟಾ ನಗರ, ಇಂಡಸ್ಟ್ರಿಯಲ್ ಹಾಗೂ ಚಿತ್ರಗಿ ಫೀಡರಿನ ಎಲ್ಲಾ ಭಾಗಗಳಲ್ಲಿ ಐಆರ್‌ಬಿಯವರ ಕಾಮಗಾರಿ ಇರುವ ಕಾರಣ ಮುಂಜಾನೆ 9ರಿಂದ ಮದ್ಯಾಹ್ನ 4.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕೆಪಿಟಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top