ಶಿರಸಿ: ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟವು ಸೆ.10 ರವಿವಾರದಂದು ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆಸಕ್ತ ಕ್ರೀಡಾಳುಗಳು ತಮ್ಮ ಹೆಸರನ್ನು ನೋಂದಾಯಿಸಲು ಸೆ.9 ಶನಿವಾರ ಕೊನೆಯ ದಿನವಾಗಿದೆ.
ಪುರುಷರಿಗಾಗಿ ಗುಂಪು ಸ್ಪರ್ಧಾ ವಿಭಾಗದಲ್ಲಿ ಕಬ್ಬಡಿ, ಖೋ-ಖೋ, ವಾಲಿಬಾಲ್, ಪುಟ್‌ಬಾಲ್, ಥ್ರೋ ಬಾಲ್, ಯೋಗಾಸನ ಹಾಗೂ ಅಥ್ಲೆಟಿಕ್ ವಿಭಾಗದಲ್ಲಿ 100ಮೀ, 200ಮೀ, 400ಮೀ, 800ಮೀ, 1500ಮೀ, 5000ಮೀ ಹಾಗೂ 4X100 ರೀಲೇ,4X400 ರೀಲೆ, ಉದ್ದಜಿಗಿತ, ಎತ್ತರ ಜಿಗಿತ, ಚಕ್ರ ಎಸೆತ ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, 100ಮೀ ಹರ್ಡಲ್ಸ್ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಬಹುದಾಗಿದೆ.
ಮಹಿಳೆಯರಿಗಾಗಿ ಕಬ್ಬಡಿ, ಖೋ-ಖೋ, ವಾಲಿಬಾಲ್, ಥ್ರೋ ಬಾಲ್, ಯೋಗಾಸನ ಅಥ್ಲೆಟಿಕ್ಸ್ ಸ್ಪರ್ಧಾ ವಿಭಾಗದಲ್ಲಿ 100ಮೀ ,200ಮೀ, 400ಮೀ, 800ಮೀ, 1500ಮೀ, 3000ಮೀ, ಹಾಗು 4X100 ರೀಲೇ. 4X400 ಮೀ ರಿಲೇ, ಉದ್ದಜಿಗಿತ, ಎತ್ತರ ಜಿಗಿತ, ಚಕ್ರ ಎಸೆತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಬಹುದಾಗಿದೆ.
ಹೆಸರು ನೋಂದಾಯಿಸಲು ಕಿರಣಕುಮಾರ, ಕ್ರೀಡಾಧಿಕಾರಿ ಮೊಬೈಲ್ ಸಂಖ್ಯೆ :Tel:+919449801404, ಸಂಪರ್ಕಿಸಲು ಕೋರಿದೆ.